Asianet Suvarna News Asianet Suvarna News

ಗೌಡರನ್ನು ಸಿದ್ದು ಟೀಕಿಸಿದ್ದಕ್ಕೆ ಒಕ್ಕಲಿಗರು ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದಿದ್ದಾರೆ : ಬಿಎಸ್‌ವೈ

ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಪರ್ಸಂಟೇಜ್‌ ಸರ್ಕಾರ. ಈ ಸರ್ಕಾರ ಬರಗಾಲದಲ್ಲಿ ಜನರ ಕೈ ಬಿಟ್ಟಿದೆ. ರೈತರ ಗೋಳು ಕೇಳುವವರೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸರ್ಕಾರವನ್ನು ಕಿತ್ತೊಗೆದು ರೈತರಿಗಾಗಿಯೇ ಕೆಲಸ ಮಾಡುವ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

BS Yeddyurappa Slams Congress And CM

ಕಡೂರು : ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಪರ್ಸಂಟೇಜ್‌ ಸರ್ಕಾರ. ಈ ಸರ್ಕಾರ ಬರಗಾಲದಲ್ಲಿ ಜನರ ಕೈ ಬಿಟ್ಟಿದೆ. ರೈತರ ಗೋಳು ಕೇಳುವವರೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸರ್ಕಾರವನ್ನು ಕಿತ್ತೊಗೆದು ರೈತರಿಗಾಗಿಯೇ ಕೆಲಸ ಮಾಡುವ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಪ್ರಚಾರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರದಲ್ಲಿ ದಾಖಲೆ ಸ್ಥಾಪಿಸಿದ ಕಾಂಗ್ರೆಸ್‌ ದೇಶ ಹಾಳು ಮಾಡಿದರೆ, ಸಿದ್ದರಾಮಯ್ಯ ರಾಜ್ಯವನ್ನು ಹಾಳು ಮಾಡಿದರು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ರೈತರಿಗೆ ಮೋಸ, ನಿರಂತರ ಭ್ರಷ್ಟಾಚಾರ, ದುರಾಡಳಿತ ಹಾಗೂ ಅಭಿವೃದ್ಧಿ ಹೆಸರಲ್ಲಿ ಹಗಲು ದರೋಡೆ ಮಾಡಿದೆ. .2.50 ಲಕ್ಷ ಕೋಟಿ ಸಾಲ ಮಾಡಿದೆ. ಕೇಂದ್ರ ಕೊಟ್ಟಅನುದಾನ ಬಳಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಎಸ್‌ವೈ ಆರೋಪಿಸಿದರು.

ಇದೇ ವೇಳೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿರುವುದರಿಂದ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಿದೆ ಎಂದು ಇದೇ ವೇಳೆ ಬಿಎಸ್‌ವೈ ಹೇಳಿದರು.

ಚುನಾವಣಾ ಸಮೀಕ್ಷೆಗಳ ಕುರಿತು ಆಕ್ಷೇಪಿಸುವುದಿಲ್ಲ. ಟೀಕಿಸುವುದಕ್ಕೂ ಹೋಗುವುದಿಲ್ಲ. ಕಾರಣ ಚುನಾವಣಾ ಪೂರ್ವದಲ್ಲಿ ಇದ್ದ ಸ್ಥಿತಿಗೂ, ಈಗಿನ ಸ್ಥಿತಿಗೂ ಹಾಗೂ ಕೆಲವೆಡೆ ಅಭ್ಯರ್ಥಿಗಳ ಬದಲಾವಣೆಗಳ ನಂತರದ ಸ್ಥಿತಿಗತಿಗಳಲ್ಲಿ ಬದಲಾವಣೆಗಳು ಆಗುತ್ತವೆ. ಈಗ ಕೇವಲ 40ರಿಂದ 50 ಸ್ಥಾನ ಗೆಲ್ಲುವ ಸ್ಥಿತಿ ಕಾಂಗ್ರೆಸ್‌ನದಾಗಿದೆ.

ಸ್ಪರ್ಧೆಗೆ ಮುನ್ನವೇ ಸೋಲೊಪ್ಪಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವರುಣಾದಲ್ಲೂ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios