ಬೆಂಗಳೂರು (ಫೆ. 27): ಭಾರತೀಯ ಸೇನೆ ಪಾಕ್ ಒಳಗೆ ನುಗ್ಗಿ ಉಗ್ರರ ನೆಲೆಯನ್ನು ನಾಶ ಮಾಡಿದೆ. 40 ವರ್ಷದ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಪ್ರತಿ ರಕ್ತ ಕಣಕ್ಕೂ ಪ್ರತಿಕಾರ ತೆಗೆದುಕೊಂಡಿದ್ದೇವೆ ಎಂದು ಚಿತ್ರದುರ್ಗದಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.  

ಸರ್ಜಿಕಲ್ ಸ್ಟ್ರೈಕ್ ನಂತರ ಎಲ್ಲೆಲ್ಲೂ ಮೋದಿ ಪರ ಜೈಕಾರ ಕೇಳಿ ಬರುತ್ತಿದೆ. ಮೋದಿ ಪರ ಅಲೆ ಎದ್ದಿದೆ. ಇವೆಲ್ಲದರ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನ ಗೆಲ್ಲುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ. 

"