ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಬುಧವಾರದಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇದರಂತೆ 2017ರ ಏಪ್ರಿಲ್ 1 ರಿಂದ  ಬಿಎಸ್ III ವಾಹನಗಳ ಮಾರಾಟ ಹಾಗೂ ನೋಂದಣಿ ರದ್ದಾಗಲಿದೆ. ಕೋರ್ಟ್ ಈ ಆದೇಶದಿಂದ ಬೆಚ್ಚಿ ಬಿದ್ದಿರುವ ಹೀರೋ, HMSI, ಬಜಾಜ್, ಸುಜುಕಿ ಕಂಪೆನಿಗಳು ದಾಸ್ತಾನಿರುವ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಲು ಭಾರಿ ಆಫರ್ ನೀಡಿವೆ. ಇವರ ಈ ಭರ್ಜರಿ ಆಫರ್'ನಿಂದ ಶೋ ರೂಂಗಳಲ್ಲೇ ಟ್ರಾಫಿಕ್ ಜಾಮ್ ಆಗಿದೆ.

ನವದೆಹಲಿ(ಮಾ.31): ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಬುಧವಾರದಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇದರಂತೆ 2017ರ ಏಪ್ರಿಲ್ 1 ರಿಂದ ಬಿಎಸ್ III ವಾಹನಗಳ ಮಾರಾಟ ಹಾಗೂ ನೋಂದಣಿ ರದ್ದಾಗಲಿದೆ. ಕೋರ್ಟ್ ಈ ಆದೇಶದಿಂದ ಬೆಚ್ಚಿ ಬಿದ್ದಿರುವ ಹೀರೋ, HMSI, ಬಜಾಜ್, ಸುಜುಕಿ ಕಂಪೆನಿಗಳು ದಾಸ್ತಾನಿರುವ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಲು ಭಾರಿ ಆಫರ್ ನೀಡಿವೆ. ಇವರ ಈ ಭರ್ಜರಿ ಆಫರ್'ನಿಂದ ಶೋ ರೂಂಗಳಲ್ಲೇ ಟ್ರಾಫಿಕ್ ಜಾಮ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ಸ್ ಮ್ಯಾನುಫ್ಯಾಕ್ಚರ್ಸ್ (SIAM) ಪ್ರಕಾರ ಭಾರತದಲ್ಲಿ 8.2 ಲಕ್ಷ ಬಿ.ಎಸ್-III ಮಾದರಿಯ ವಾಹನಗಳ ದಾಸ್ತಾನು ಇದೆ. ಅವುಗಳಲ್ಲಿ 6 ಲಕ್ಷಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 12 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕಂಪೆನಿಗಳಿಗೂ ಭಾರೀ ನಷ್ಟವಾಗಲಿದೆ. ಇದರಿಂದ ಕಂಗೆಟ್ಟಿರುವ ಕಂಪೆನಿಗಳು ಬೇರೆ ವಿಧಿ ಇಲ್ಲದೆ ಗ್ರಾಹಕರಿಗೆ ಭಾರೀ ಕಡಿಮೆ ದರದಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ.

ಹೀರೋ, HMSI, ಬಜಾಜ್, ಸುಜುಕಿಯ ಬಿಎಸ್ III ಮಾದರಿಯ ದ್ವಿಚಕ್ರ ವಾಹನವೊಂದರ ಮೇಲೆ ಸುಮಾರು 22,000 ರೂಪಾಯಿಯಷ್ಟು ರಿಯಾಯಿತಿ ನೀಡಿವೆ. ಅತ್ತ ಸಾಧ್ಯವಾದಷ್ಟು ಬೇಗ ಈ ದಾಸ್ತಾನನ್ನು ಖಾಲಿ ಮಾಡಲು ಕಂಪೆನಿಗಳು ಹರ ಸಾಹಸ ಪಡುತ್ತಿದ್ದರೆ ಇತ್ತ ಗ್ರಾಹಕರು ಸಿಕ್ಕಿದ್ದೇ ಅವಕಾಶ ಎಂಬಂತೆ ವಾಹನಗಳನ್ನು ಖರೀದಿಸಲು ಶೋ ರೂಂಗಳಿಗೆ ಮುಗಿ ಬಿದ್ದಿದ್ದಾರೆ.