ಬಿಕಾಂ ಪರೀಕ್ಷೆ ಹಾಲ್‌ಗೆ ನೇರವಾಗಿ ಬಂದ ಮಧುವಣಗಿತ್ತಿ

First Published 9, May 2018, 12:34 PM IST
Bride writes B Com exam on the day of wedding
Highlights

ಮದುವೆ, ಶಿಕ್ಷಣ ಎರಡಕ್ಕೂ ಸಮಾನ ಅವಕಾಶ ನೀಡಿರುವ ವಿದ್ಯಾರ್ಥಿನಿಯೊಬ್ಬಳು, ಪರೀಕ್ಷೆ ಬರೆದು, ನಂತರ ಹಸೆಮಣೆ ಏರಿದ್ದಾಳೆ. ಮಗಳ ಈ ನಿರ್ಧಾರಕ್ಕೆ ಪೋಷಕರೂ ಸಾಥ್ ನೀಡಿದ್ದು, ಮಗಳು ಪರೀಕ್ಷೆ ಬರೆದು ಬರುವವರೆಗೂ ಪರೀಕ್ಷಾ ಕೊಠಡಿ ಹೊರ ನಿಂತು, ಮಗಳನ್ನು ಕರೆದೋಯ್ದಿದ್ದಾರೆ.

ಮಂಡ್ಯ: 'ಬೇಟಿ ಬಚಾವೋ ಬೇಟಿ ಪಡಾವೋ' ಎಂಬ ಘೋಷವಾಕ್ಯಕ್ಕೆ ಅರ್ಥ ಬರುವಂತೆ ಮಾಡಿದ ವಿದ್ಯಾರ್ಥಿನಿಯೊಬ್ಬಳು, ಮದುವೆ, ಶಿಕ್ಷಣ ಎರಡಕ್ಕೂ ಸಮಾನ ಅವಕಾಶ ನೀಡಿದ್ದಾಳೆ. ಹಸೆಮಣೆ ಏರುವ ಮುನ್ನ ಬಿ.ಕಾಂ.ಪರೀಕ್ಷೆ ಬರೆದಿದ್ದಾಳೆ.

ಕೆ.ಆರ್ ಪೇಟೆಯ ಕಲ್ಪತರು ಕಾಲೇಜಿನ ವಿಧ್ಯಾರ್ಥಿನಿ ಕಾವ್ಯಾ ಮೇ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ದಿನವೇ ಇವರು ಪರೀಕ್ಷೆ ಬರೆದಿದ್ದು ವಿಶೇಷ. 11 ಗಂಟೆಗೆ ಮದುವೆ ಮುಹೂರ್ತವಿತ್ತು. ಕಾವ್ಯ ಎರಡನೇ ವರ್ಷದ ಬಿ.ಕಾಂ ಓದುತ್ತಿದ್ದು, ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಇತ್ತು. ಮದುವೆಯ ಕೆಲವು ಶಾಸ್ತ್ರಗಳನ್ನು ಮುಗಿಸಿಕೊಂಡು, ಪರೀಕ್ಷೆ ಬರೆದಿದ್ದಾರೆ. ನಂತರ ಮತ್ತೆ ಉಳಿದ ಕೆಲವು ಶಾಸ್ತ್ರಗಳನ್ನುಪೂರೈಸಿದ್ದಾರೆ.

ಮದುವೆ ಉಡುಗೆಯಲ್ಲಿಯೇ ಪರೀಕ್ಷೆ ಕೊಠಡಿಗೆ ಬಂದಿದ್ದರು ಕಾವ್ಯಾ. ಸಂಸಾರಿಕ ಜೀವನದೊಂದಿಗೆ, ಶಿಕ್ಷಣಕ್ಕೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ. ಮಗಳು ಪರೀಕ್ಷೆ ಬರೆದು ಮುಗಿಸುವವರೆಗೂ, ಪರೀಕ್ಷಾ ಕೊಠಡಿಯ ಹೊರಗೆ ನಿಂತು, ಮಗಳನ್ನು ಪೋಷಕರು ಕರೆದೊಯ್ದಿದ್ದಾರೆ.

loader