ಯಾವ್ಯಾವುದೋ ಕಾರಣಕ್ಕೆ ಅಂತಿಮ ಹಂತಕ್ಕೆ ಬಂದಿದ್ದ ಮದುವೆ ಕೊನೆಕ್ಷಣದಲ್ಲಿ ರದ್ದಾಗುವುದನ್ನು ನೋಡಿದ್ದೇವೆ. ಆದರೆ ಪ್ರಧಾನಿಗಾಗಿ ಎಲ್ಲಾದರೂ ಮದುವೆ ಮುರಿದು ಬೀಳುವುದನ್ನು ನೋಡಿದ್ದೀರಾ? ಇಂತಹದ್ದೊಂದು ವಿಲಕ್ಷಣವಾದ ಘಟನೆ ನಡೆದಿದೆ. ನರೇಂದ್ರ ಮೋದಿಗಾಗಿ ಇಲ್ಲೊಂದು ಜೋಡಿ ತಮ್ಮ ಮದುವೆಯನ್ನೇ ರದ್ದುಗೊಳಿಸಿಕೊಂಡಿದ್ದಾರೆ.
ನವದೆಹಲಿ (ಜು.12): ಯಾವ್ಯಾವುದೋ ಕಾರಣಕ್ಕೆ ಅಂತಿಮ ಹಂತಕ್ಕೆ ಬಂದಿದ್ದ ಮದುವೆ ಕೊನೆಕ್ಷಣದಲ್ಲಿ ರದ್ದಾಗುವುದನ್ನು ನೋಡಿದ್ದೇವೆ. ಆದರೆ ಪ್ರಧಾನಿಗಾಗಿ ಎಲ್ಲಾದರೂ ಮದುವೆ ಮುರಿದು ಬೀಳುವುದನ್ನು ನೋಡಿದ್ದೀರಾ? ಇಂತಹದ್ದೊಂದು ವಿಲಕ್ಷಣವಾದ ಘಟನೆ ನಡೆದಿದೆ. ನರೇಂದ್ರ ಮೋದಿಗಾಗಿ ಇಲ್ಲೊಂದು ಜೋಡಿ ತಮ್ಮ ಮದುವೆಯನ್ನೇ ರದ್ದುಗೊಳಿಸಿಕೊಂಡಿದ್ದಾರೆ.
ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ, ಉತ್ತರ ಪ್ರದೇಶ ಮೂಲದ ಉದ್ಯಮಿಯೊಬ್ಬರು ಸರ್ಕಾರಿ ಉದ್ಯೋಗಿಯೊಬ್ಬರನ್ನು ಮದುವೆಯಾಗಬೇಕಿತ್ತು. ಎರಡೂ ಕಡೆಯವರು ದೇವಸ್ಥಾನವೊಂದರಲ್ಲಿ ಮದುವೆ ತಯಾರಿ ನಡೆಸಿದ್ದರು. ತಯಾರಿಯು ಅಂತಿಮಗೊಂಡಿತ್ತು. ವರ-ವಧುವಿನ ಕಡೆ ಸಡಗರ, ಸಂಭ್ರಮ ಮನೆ ಮಾಡಿತ್ತು. ಹೀಗೆ ಎಲ್ಲವೂ ಸುಸೂತ್ರವಾಗಿರುವಾಗ ದೇಶದ ಆರ್ಥಿಕ ಕುಸಿತದ ವಿಚಾರವನ್ನು ಪ್ರಸ್ತಾಪಿಸಿದರು. ಆರ್ಥಿಕ ಕುಸಿತಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ವಧು ಹೇಳಿದರು. ಇದನ್ನು ಮೋದಿ ಭಕ್ತನಾದ ವರ ವಿರೋಧಿಸಿದ. ಹೀಗೆ ಮಾತಿಗೆ ಮಾತು ಬೆಳೆದು ಎರಡು ಕಡೆಯವರಲ್ಲಿ ವಾಗ್ವಾದ ಜೋರಾಯಿತು. ಪರಿಣಾಮವಾಗಿ ಇನ್ನೇನು ಮದುವೆಯಾಗಬೇಕಿದ್ದ ಜೋಡಿಗಳು ಮದುವೆಯನ್ನು ರದ್ದುಗೊಳಿಸಿಕೊಂಡರು.
ವಧು-ವರರ ಹೆಸರು, ಯಾವ ಊರಿನವರು ಎಂಬುದನ್ನು ಬಹಿರಂಗಗೊಳಿಸಿಲ್ಲ.
