ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್’ನಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಹತ್ಯೆಯಾದ ದಿನ ಗೌರಿ ಲಂಕೇಶ್ ಮನೆ ಹೊರಭಾಗದಲ್ಲಿ ಅನುಮಾನಾಸ್ಪದ ವ್ಯಕ್ತಿ ಎರಡು ಬಾರಿ ಮೂತ್ರ ವಿಸರ್ಜನೆ ಮಾಡಿರುವುದು ಗಮನಕ್ಕೆ ಬಂದಿದೆ.
ಬೆಂಗಳೂರು (ಸೆ.15): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್’ನಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಹತ್ಯೆಯಾದ ದಿನ ಗೌರಿ ಲಂಕೇಶ್ ಮನೆ ಹೊರಭಾಗದಲ್ಲಿ ಅನುಮಾನಾಸ್ಪದ ವ್ಯಕ್ತಿ ಎರಡು ಬಾರಿ ಮೂತ್ರ ವಿಸರ್ಜನೆ ಮಾಡಿರುವುದು ಗಮನಕ್ಕೆ ಬಂದಿದೆ.
ಶಂಕಿತ ವ್ಯಕ್ತಿಯೊಬ್ಬ ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ7 ಗಂಟೆಗೆ ಗೌರಿ ಲಂಕೇಶ್ ಮನೆ ಹೊರಗೆ ಕಾಣಿಸಿಕೊಂಡಿದ್ದಾನೆ. ಬಿಳಿ ಬಣ್ಣದ ಶರ್ಟನ್ನು ಧರಿಸಿದ್ದು ಹೆಲ್ಮೇಟ್ ಹಾಕಿಕೊಂಡಿದ್ದ. ಅವರ ಮನೆ ರಸ್ತೆಯ ತುದಿಯಲ್ಲಿ ಯು ಟರ್ನ್ ತೆಗೆದುಕೊಂಡಿದ್ದಾನೆ. ಮತ್ತೆ 8 ಗಂಟೆ ಹೊತ್ತಿಗೆ ಅಲ್ಲಿಗೆ ಬಂದಿದ್ದಾನೆ. ಆಗ ಗೌರಿ ಲಂಕೇಶ್ ಕಾರಿನಿಂದಿಳಿದು ಗೇಟ್ ದಾಟಿ ಮನೆಗೆ ಒಳಗೆ ಹೋಗುವಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ.
ತನಿಖೆ ನಡೆಸುತ್ತಿರುವ ಎಸ್’ಐಟಿ ತಂಡ ಪ್ರತಿಯೊಂದು ಯಂಗಲಿನಿಂದಲೂ ಸಿಸಿಟಿವಿ ಫೂಟೇಜನ್ನು ಪರಿಶೀಲಿಸುತ್ತಿದೆ.
