ಅತ್ಯಂತ ಪ್ರಸಿದ್ದ ಕಾರ್ಯಕ್ರಮಗಳ ಪೈಕಿ ಒಂದಾದ ಡ್ರಾಮಾ ಜೂನಿಯರ್ಸ್’ನಲ್ಲಿ ಬ್ರಾಹ್ಮಣ ಪುರೋಹಿತರನ್ನು ಆಡಿಕೊಂಡು ನಗಲಾಗಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ವಿರೋಧಕ್ಕೆ ಕಾರಣವಾಗಿದೆ. ಜಾತಿ ಧರ್ಮಗಳ ಆದಾರದ ಮೇಲೆ ಈ ರೀತಿ ಕಾಮಿಡಿ ಮಾಡೋದು ಸರಿಯಲ್ಲ ಅನ್ನೋದು ಒಂದು ವಾದವಾದರೆ, ಕಲೆಯನ್ನು ಜಾತಿ ಧರ್ಮಗಳ ಜೊತೆ ಸಮೀಕರಣ ಮಾಡಿ ನೋಡಬೇಡಿ ಅಷ್ಟೊಂದು ಅಸಹುಷ್ಣುಗಳಾಗಬೇಡಿ ಅನ್ನೊಂದು ಇನ್ನೊಂದು ವಾದ. ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರವನ್ನು ಇಟ್ಟುಕೊಂಡು ಸುವರ್ಣ ನ್ಯೂಸ್ ನೋಯಿಸುತ್ತೆ ನಾಟಕ ಎನ್ನುವ ಪ್ಯಾನಲ್ ನಡೆಸಿತು.
ಬೆಂಗಳೂರು (ಆ.08): ಅತ್ಯಂತ ಪ್ರಸಿದ್ದ ಕಾರ್ಯಕ್ರಮಗಳ ಪೈಕಿ ಒಂದಾದ ಡ್ರಾಮಾ ಜೂನಿಯರ್ಸ್’ನಲ್ಲಿ ಬ್ರಾಹ್ಮಣ ಪುರೋಹಿತರನ್ನು ಆಡಿಕೊಂಡು ನಗಲಾಗಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ವಿರೋಧಕ್ಕೆ ಕಾರಣವಾಗಿದೆ. ಜಾತಿ ಧರ್ಮಗಳ ಆದಾರದ ಮೇಲೆ ಈ ರೀತಿ ಕಾಮಿಡಿ ಮಾಡೋದು ಸರಿಯಲ್ಲ ಅನ್ನೋದು ಒಂದು ವಾದವಾದರೆ, ಕಲೆಯನ್ನು ಜಾತಿ ಧರ್ಮಗಳ ಜೊತೆ ಸಮೀಕರಣ ಮಾಡಿ ನೋಡಬೇಡಿ ಅಷ್ಟೊಂದು ಅಸಹುಷ್ಣುಗಳಾಗಬೇಡಿ ಅನ್ನೊಂದು ಇನ್ನೊಂದು ವಾದ. ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರವನ್ನು ಇಟ್ಟುಕೊಂಡು ಸುವರ್ಣ ನ್ಯೂಸ್ ನೋಯಿಸುತ್ತೆ ನಾಟಕ ಎನ್ನುವ ಪ್ಯಾನಲ್ ನಡೆಸಿತು.
ಹಾಸ್ಯಕ್ಕೆ ಒಂದು ಜಾತಿ, ಪಂಗಡವೇ ಆಹಾರವಾಗಬೇಕಾ?
ಇತಿಹಾಸ ನೋಡಿದರೆ ಸಂಸ್ಕಾರ ಚಿತ್ರ ನೀಓಡಿದರೆ ಬ್ರಾಹ್ಮಣ ಕುಟುಂಬಗಳ ಘಟನೆಗಳನ್ನು, ಬೈರಪ್ಪನವರ ಪರ್ವವನ್ನು ಓದಿ ಸುಮ್ಮನಿದ್ದ ಪ್ರಜ್ಞಾವಂತ ಸಮಾಜ ಇಂದು ಒಂದು ಸಣ್ಣ ನಾಟಕದಲ್ಲಿ ಮನಸಿಗೆ ನೋವಾಯ್ತು ಅಂತ ಬೊಬ್ಬೆ ಹೊಡೆಯುವುದನ್ನು ನೋಡಿದರೆ ನಗು ಬರುತ್ತದೆ. ಆಯಾ ಸಮದಾಯಗಳಿಗೆ ಅವಮಾನವಾದಾಗ ಆಯಾ ಸಮುದಾಯಗಳು ಖಂಡಿಸಬೇಕು ಅನ್ನೋದಾದ್ರೆ ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಅನ್ನೋದನ್ನ ಬಿಟ್ಟು ಬಿಡಬೇಕು. ಒಬ್ಬ ಕೆರ ಹೊಲಿಯುವವನನ್ನು ಹಿರಣಯ್ಯ ಜೋಕ್ ಮಾಡಿದಾಗ ಚಪ್ಪಾಳೆ ತಟ್ಟುವ ಜನ ಮಕ್ಕಳು ನಾಟಕ ಮಾಡಿದಾಗ ಕೆರಳುತ್ತೆ ಅನ್ನೋದಾದ್ರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಚಿಂತಕರಾದ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
