ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ರಾಗಿಹಳ್ಳಿ ಗ್ರಾಮದ ರಸ್ತೆಯಲ್ಲಿ ಕೆಲದಿನಗಳಿಂದ ನಾಲ್ವರು ಯುವಕರು ಯುವತಿಯರಿಗೆ ಹಿಂಭಾಲಿಸಿಕೊಂಡು ಚುಡಾಯಿಸುತ್ತಿದ್ದರು. ಈ ವಿಚಾರ ತಿಳಿದ ಯುವತಿಯರ ಪೋಷಕರು ಆ ಯುವಕರಿಗಾಗಿ ಹಲವು ಬಾರಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು(ಜು.29): ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ರಾಗಿಹಳ್ಳಿ ಗ್ರಾಮದ ರಸ್ತೆಯಲ್ಲಿ ಕೆಲದಿನಗಳಿಂದ ನಾಲ್ವರು ಯುವಕರು ಯುವತಿಯರಿಗೆ ಹಿಂಭಾಲಿಸಿಕೊಂಡು ಚುಡಾಯಿಸುತ್ತಿದ್ದರು. ಈ ವಿಚಾರ ತಿಳಿದ ಯುವತಿಯರ ಪೋಷಕರು ಆ ಯುವಕರಿಗಾಗಿ ಹಲವು ಬಾರಿ ಹುಡುಕಾಟ ನಡೆಸಿದ್ದಾರೆ.

ನಿನ್ನೆ ಎಂದಿನಂತೆ ಆ ಯುವಕರು ಯುವತಿಯನ್ನು ಚುಡಾಯಿಸಿದ್ದಕ್ಕೆ ಶುರು ಮಾಡಿದ್ದರು. ಯುವಕರ ಪುಂಡಾಟ ಕಂಡ ಗ್ರಾಮಸ್ಥರು ನಡು ರಸ್ತೆಯಲ್ಲಿ ಇಬ್ಬರು ಯುವಕರನ್ನು ಹಗ್ಗದಿಂದ ಕಟ್ಟಿ ಥಳಿಸುತ್ತಾ ರಾಗಿಹಳ್ಳಿ ಗ್ರಾಮದಿಂದ ಬನ್ನೇರುಘಟ್ಟ ಪೊಲೀಸ್ ಠಾಣೆವರೆಗೂ ಥಳಿಸಿಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.