ಸರಣಿ ಅಪಘಾತವಾಗಿ ಜೀಪೊಂದು ಅಂಗಡಿಗೆ ನುಗ್ಗಿದ ಘಟನೆ ದಾಬಸ್ ಪೇಟೆಯ ಬಳಿ ನಡೆದಿದೆ. ಈ ವೇಳೆ ಬಾಲಕನೋರ್ವ ಗಾಯಗೊಂಡಿದ್ದಾನೆ. 

ದಾಬಸ್‌ಪೇಟೆ: ಅಂಗಡಿಯ ಮುಂದೆ ಸೈಕಲ್‌ನಲ್ಲಿ ಆಟವಾಡುತ್ತಿದ್ದ ಮಗುವಿಗೆ ಬುಲೇರೋ ಜೀಪೊಂದು ಡಿಕ್ಕಿ ಹೊಡೆದಿರುವ ದುರ್ಘಟನೆ ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಬಳಿಯ ಸತ್ಯಂ ಹೋಟೆಲ್‌ ಬಳಿ ನಡೆದಿದೆ.

ಬಾಲಕ ವೇಣುಗೋಪಾಲ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳವಾರ ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಲಿಸುತ್ತಿದ್ದ ಬೋಲೇರೋ ಜೀಪ್‌ನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲಿಗೆ ಗುದ್ದಿ, ಟೆಲಿಕಾಂ ಅಂಗಡಿಗೆ ನುಗ್ಗಿದೆ. ಸತ್ಯಂ ಹೋಟೆಲ್‌ ಬಳಿಯ ಅಂಗಡಿಯ ಬಳಿ ಸೈಕಲ್‌ ತುಳಿದುಕೊಂಡು ಆಟವಾಡುತ್ತಿದ್ದ ವೇಣುಗೋಪಾಲ್‌ಗೆ ಗುದ್ದಿದ್ದಾನೆ. ಗುದ್ದಿಗೆ ರಭಸಕ್ಕೆ ಮಗುವಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅದೃಷ್ಟವಷಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೋಲೋರೋ ಜೀಪ್‌ನ ಚಾಲಕ ಪಾನಮತ್ತನಾಗಿದ್ದಲ್ಲದೆ ಗಾಂಜಾ ಸೇವಿಸಿದ್ದ ಎನ್ನಲಾಗಿದೆ. ಬೋಲೋರೋ ಜೀಪ್‌ನಲ್ಲಿ ಎಸ್‌ಎಸ್‌ ಶೀಟ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದ. ಘಟನೆಯಲ್ಲಿ ಒಂದು ಬೈಕ್‌, ​ಸೈಕಲ್‌, ಕಾರು ಹಾಗೂ ಅಂಗಡಿ ಜಖಂ ಆಗಿದೆ.