ಇದೊಂದು  ವಿಚಿತ್ರ ಆದರೆ ನಮ್ಮ ಮನಸ್ಸನ್ನು ಒಂದು ಕ್ಷಣ ವಿಚಲಿತ ಮಾಡುವ ಸುದ್ದಿ.  ಶಸ್ತ್ರ ಚಿಕಿತ್ಸೆಗೆ ಬಂದ ರೋಗಿಯ ಬೇಡಿಕೆ  ಕಂಡ ವೈದ್ಯರು ಅಕ್ಷರಶಃ ಹೌಹಾರಿದ್ದರು.  ಈ ಸುದ್ದಿಯನ್ನು ಓದಿ ಮನಸ್ಸು ಹಗುರ ಮಾಡಿಕೊಳ್ಳಲೇಬೇಕು.

ಕೆನಡಾದ ಸರ್ಜನ್ ಒಬ್ಬರ ಬಳಿ ಶಸ್ತ್ರಚಿಕಿತ್ಸೆಗೆ ಬಂದಿದ್ದ ಬಾಲಕ ತನ್ನ ಜತೆಗೆ ಇನ್ನೊಬ್ಬರನ್ನು ಬದುಕಿಸ ಬೇಕೆಂದು ಬೇಡಿಕೊಳ್ಳುತ್ತಿದ್ದ. ವೈದ್ಯ ಆರಪೇಶನ್ ಎರಡೆರಡು ಆಪರೇಶನ್ ಮಾಡಬೇಕಾದ ಸ್ಥಿತಿ ಎದುರಾಗಿತ್ತು.,

8 ವರ್ಷದ ಬಾಲಕ ಜಾಕ್ಸನ್ ಮಿಕಾಯ್ ಗೆ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗಿತ್ತು. ಪೋಷಕರು ಅವನನ್ನು ವೈದ್ಯರ ಬಳಿ ಹೊತ್ತು ತಂದಿದ್ದರು. ಅವನ ಜತೆ ಇನ್ನೊಬ್ಬರನ್ನು ಕರೆದುಕೊಂಡು ಬಂದಿದ್ದರು.

ಹಾಲಾದ ನನ್ನ ಚಿಕ್ಕ ಟೆಡ್ಡಿ ಬೇರ್ ಸಹ ದುಸ್ತಿ ಮಾಡಿಕೊಡಿ ಎಂದು ವೈದ್ಯರಿಗೆ ಬಾಲಕ ದುಂಬಾಲು ಬಿದ್ದಿದ್ದ. ಬಾಲಕನ ವಿನಂತಿಯನ್ನು ತಳ್ಳಿಹಾಕಲು ಸಾಧ್ಯವಾಗದ ವೈದ್ಯರು ಆತನ ಕೋರಿಕೆ ನೆರವೇರಿಸಿದರು. ಫೋಟೋ ಸಹ ಸೋಶಿಯುಲ್ ಮೀಡಿಯಾದಲ್ಲಿ ವೈರಲ್ ಆಗಿದೆ.