ತಂದೆಯ 46 ಲಕ್ಷ ರು. ಸ್ನೇಹಿತರಿಗೆ ಹಂಚಿದ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Aug 2018, 8:22 AM IST
Boy Distributes Fathers 46 lakh Money Among  Friends
Highlights

ಸ್ನೇಹಿತರ ದಿನಾಚರಣೆಯ ವೇಳೆ ಮಧ್ಯ ಪ್ರದೇಶದ ಜಬಲ್ಪುರದ ಉದ್ಯಮಿಯೊಬ್ಬರ ಪುತ್ರ ತನ್ನ ಸ್ನೇಹಿತರಿಗೆ ತಂದೆಯು ಆಸ್ತಿ ಮಾರಿ ತಂದಿರಿಸಿದ್ದ 46 ಲಕ್ಷ ರು. ವಿತರಿಸಿದ್ದಾನೆ. 

ಜಬಲ್ಪುರ (ಮಧ್ಯ ಪ್ರದೇಶ): ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಮಾತಿದೆ. ಅದೇ ರೀತಿ ಕಳೆದ ವಾರ ನಡೆದ ಸ್ನೇಹಿತರ ದಿನಾಚರಣೆಯ ವೇಳೆ ಮಧ್ಯ ಪ್ರದೇಶದ ಜಬಲ್ಪುರದ ಉದ್ಯಮಿಯೊಬ್ಬರ ಪುತ್ರ ತನ್ನ ಸ್ನೇಹಿತರಿಗೆ 46 ಲಕ್ಷ ರು. ವಿತರಿಸಿದ್ದಾನೆ. ಈ ಪೈಕಿ ದಿನಗೂಲಿ ನೌಕರರೊಬ್ಬರ ಮಗನಿಗೆ 15 ಲಕ್ಷ ರು. ಹಾಗೂ ತನ್ನ ಹೋಮ್‌ವರ್ಕ್ ಮಾಡುತ್ತಿದ್ದವನಿಗೆ 3 ಲಕ್ಷ ರು. ನೀಡಿದ್ದಾನೆ.

ಜಬಲ್ಪುರದ ಬಿಲ್ಡರ್‌ ಇತ್ತೀಚೆಗೆ ಆಸ್ತಿಯೊಂದನ್ನು ಮಾರಿದ್ದರಿಂದ ಬಂದ 60 ಲಕ್ಷ ರು. ಹಣವನ್ನು ತಂದು ಬೀರುವಿನಲ್ಲಿ ಇಟ್ಟಿದ್ದರು. ಅದನ್ನು ನೋಡಿದ್ದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆತನ ಮಗ ತನ್ನ ತರಗತಿಯಲ್ಲಿ ಓದುತ್ತಿರುವ 35 ಸಹಪಾಠಿಗಳಿಗೆ ಹಾಗೂ ಟ್ಯೂಷನ್‌ ಸೆಂಟರ್‌ನ ಸ್ನೇಹಿತರಿಗೆ ಫ್ರೆಂಡ್‌ಶಿಪ್‌ ಡೇ ದಿನದಂದು ಸ್ಮಾರ್ಟ್‌ಫೋನ್‌, ಬೆಳ್ಳಿಯ ಬ್ರಾಸ್ಲೆಟ್‌ ಹೀಗೆ ಭರ್ಜರಿ ಗಿಫ್ಟ್‌ಗಳನ್ನು ನೀಡಿದ್ದಾನೆ. ಈತ ಕೊಟ್ಟಹಣದಿಂದ ಸ್ನೇಹಿತನೊಬ್ಬ ಹೊಸ ಕಾರೊಂದನ್ನು ಖರೀದಿಸಿದ್ದಾನೆ.

ಇಷ್ಟೆಲ್ಲಾ ಆದ ಮೇಲೆ ಬಿಲ್ಡರ್‌ಗೆ ಮನೆಯಲ್ಲಿ ಇಟ್ಟಿದ್ದ ಹಣ ನಾಪತ್ತೆ ಆಗಿರುವುದು ಮನವರಿಕೆ ಆಗಿದೆ. ಆತ ಪೊಲೀಸ್‌ ದೂರು ನೀಡಿದ ವೇಳೆ ಆತನ ಮಗನೇ ಈ ಕೃತ್ಯವೆಸಗಿರುವ ಸಂಗತಿ ಬೆಳಕಿಗೆ ಬಂದಿದೆ. ಕೊನೆಗೆ ಪೊಲೀಸರು ಹಣ ಪಡೆದ ಸ್ನೇಹಿತರ ಪಟ್ಟಿಮಾಡಿ ಹಣವನ್ನು ವಾಪಸ್‌ ನೀಡುವಂತೆ ಕೇಳಿದ್ದಾರೆ. ಕೆಲವರು 5 ದಿನದಲ್ಲಿ ಹಣವನ್ನು ಮರಳಿಸುವುದಾಗಿ ಹೇಳಿದ್ದಾರೆ. ಒಟ್ಟು 15 ಲಕ್ಷ ರು. ತಿರುಗಿ ಬಂದಿದೆ. ಆದರೆ, 15 ಲಕ್ಷ ಪಡೆದ ದಿನಗೂಲಿ ಕೆಲಸಗಾರನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದರೆ.

loader