Asianet Suvarna News Asianet Suvarna News

ಸೋದರ ಮಾವನ ಮಗಳನ್ನೇ ಮದುವೆಯಾದ ಅಳಿಯನಿಗೆ ಫಸ್ಟ್'ನೈಟ್ನಲ್ಲೇ ಆಘಾತ!: ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಾ!

ಮದುವೆ ಜೀವನದ ಬಗ್ಗೆ ಹುಡುಗರು ಒಂದು ಕನಸನ್ನು ಕಟ್ಟಿಕೊಂಡಿರುತ್ತಾರೆ..ಮದುವೆಯಾದ ಮೇಲೆ ತನ್ನ ಹೆಂಡತಿ ಜೊತೆ ಹೀಗಿರಬೇಕು. ಹೀಗೆ ಸಂಸಾರ ಜೀವನ ಮಾಡಬೇಕು ಎಂದು ಕನಸು ಕಂಡಿರುತ್ತಾರೆ.ಆದರೆ ಮದುವೆಯಾಗಿ ಒಂದು ತಿಂಗಳಲ್ಲಿ ನನ್ನ ಹೆಂಡತಿ ಹೀಗೆ ಎಂದು ಗೊತ್ತಾದ ಮೇಲೆ ಆತ ಭ್ರಮನಿರಸನಗೊಂಡಿದ್ದಾನೆ. ಇದೀಗ ಇತ್ತ ಹೆಂಡತಿಯನ್ನು ಬಿಡುವಂತೆಯು ಇಲ್ಲ,ಕಟ್ಟಿಕೊಳ್ಳುವ ಸ್ಥಿತಿಯಲಿಲ್ಲದೇ ಒದ್ದಾಡುತ್ತಿದ್ದಾನೆ.

Boy Cheated By His Relatives By This Pre planned marriage at Davangere

ದಾವಣಗೆರೆ(ಜು.30): ಮದುವೆ ಜೀವನದ ಬಗ್ಗೆ ಹುಡುಗರು ಒಂದು ಕನಸನ್ನು ಕಟ್ಟಿಕೊಂಡಿರುತ್ತಾರೆ..ಮದುವೆಯಾದ ಮೇಲೆ ತನ್ನ ಹೆಂಡತಿ ಜೊತೆ ಹೀಗಿರಬೇಕು. ಹೀಗೆ ಸಂಸಾರ ಜೀವನ ಮಾಡಬೇಕು ಎಂದು ಕನಸು ಕಂಡಿರುತ್ತಾರೆ.ಆದರೆ ಮದುವೆಯಾಗಿ ಒಂದು ತಿಂಗಳಲ್ಲಿ ನನ್ನ ಹೆಂಡತಿ ಹೀಗೆ ಎಂದು ಗೊತ್ತಾದ ಮೇಲೆ ಆತ ಭ್ರಮನಿರಸನಗೊಂಡಿದ್ದಾನೆ. ಇದೀಗ ಇತ್ತ ಹೆಂಡತಿಯನ್ನು ಬಿಡುವಂತೆಯು ಇಲ್ಲ,ಕಟ್ಟಿಕೊಳ್ಳುವ ಸ್ಥಿತಿಯಲಿಲ್ಲದೇ ಒದ್ದಾಡುತ್ತಿದ್ದಾನೆ.

ಇವನು ಬಸವರಾಜ್ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಘಟ್ಟ ಗ್ರಾಮದ ನಿವಾಸಿ. ಈತ ಮದುವೆಯಾಗಿ ಸುಂದರ ಸಂಸಾರ ನಡೆಸೋ ಕನಸು ಕಂಡಿದ್ದ. ಆದ್ರೆ, ಮದುವೆಯೇ ಈತನಪಾಲಿಗೆ ಶಿಕ್ಷೆಯಾಗಿ ಬಿಟ್ಟಿತ್ತು. ಫಸ್ಟ್​'ನೈಟಲ್ಲೇ ಆತನ ಸುಖಸಂಸಾರದ ಕನಸು ನುಚ್ಚು ನೂರಾಯ್ತು.

ಬಸವರಾಜ 2014 ಪೆಬ್ರವರಿ ತಿಂಗಳಲ್ಲಿ ತನ್ನ ಸೋದರಮಾವನ ಮಗಳನ್ನೇ ಅನಿವಾರ್ಯವೊಂದಕ್ಕೆ ಕಟ್ಟುಬಿದ್ದು ಮದುವೆಯಾದ. ಆದರೆ, ಪಸ್ಟ್ ನೈಟ್ ನಲ್ಲಿ ಆತನಿಗೆ ಆಘಾತವಾಯಿತು. ಆದರೂ ಸಂಸಾರದ ಗುಟ್ಟುಬಿಟ್ಟುಕೊಡದೇ ಸಂಸಾರ ನಡೆಸುವ ನಾಟಕವಾಡಿದ. ಆದರೆ ತುಂಬ ದಿನಗಳ ಕಾಲ ಕಹಿಸತ್ಯವನ್ನು ಬಚ್ಚಿಡಲಾರದೇ ಹುಡುಗಿ ತಂದೆ ತಾಯಿಗಳಿಗೆ ವಿಷ್ಯ ತಿಳಿಸಿ, ನಿಮ್ಮ ಮಗಳಿಗೆ ಹಾಸ್ಪಿಟಲ್ ಚೆಕ್ ಅಪ್ ಮಾಡಿಸಿ ಎಂದ.

ಅಳಿಯ ಇಷ್ಟೆಲ್ಲ ಹೇಳಿದರೂ ಮಾವ ಅತ್ತೆ ತಲೆಕೆಡಿಸಿಕೊಂಡಿರಲಿಲ್ಲ. ನಿಧಾನವಾಗಿ ಯೋಚಿಸಿದ ಬಸವರಾಜ್'​ಗೆ ಮದುವೆಗೂ ಹಿಂದಿನ ಸ್ಟೋರಿ ಅರ್ಥವಾಯ್ತು. ಬಸವರಾಜ್ ತಂಗಿ ಮದುವೆ ನಿಶ್ಚಯದ ವೇಳೆ ಸೋದರ ಮಾವ ನೇತೃತ್ವ ವಹಿಸಿದ್ದ. ಈ ವೇಳೆ ಒಂದು ಲಕ್ಷ ವರದಕ್ಷಿಣೆ ಕೇಳಿದ್ದರು. ಆ ದುಡ್ಡನ್ನು ತಾನೇ ಕೊಡುವುದಾಗಿ ಒಪ್ಪಿಕೊಂಡಿದ್ದ ಸೋದರ ಮಾವ ಆಮೇಲೆ ನೀನು ನನ್ನ ಮಗಳನ್ನ ಮದುವೆಯಾದ್ರೆ ಮಾತ್ರ ವರದಕ್ಷಿಣೆ ಹಣ ನೀಡೋದಾಗಿ ಬಸವರಾಜ್​ಗೆ ಷರತ್ತು ವಿಧಿಸಿದ್ದ ಆ ಒತ್ತಡಕ್ಕೆ ಮಣಿದು ಬಸವರಾಜ್ ಮದುವೆಯಾಗಿದ್ದ.. ಅಂದರೆ, ಬಸವರಾಜ್ ಮಾವ ತನ್ನ ಮಗಳ ಬಗ್ಗೆ ಎಲ್ಲವೂ ಗೊತ್ತಿದ್ದೇ ಈ ಮದುವೆ ಮಾಡಿಸಿದ್ದಾನೆ ಅನ್ನೋದು ಬಸವರಾಜ್ ಆರೋಪ.

ಇನ್ನೂ ಬಸವರಾಜ್ ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಹೆಂಡತಿ ಚೆಕ್ ಮಾಡಿಸಿದಾಗ ಅವಳಿಗೆ ಹೆಣ್ತನದ ಯಾವ ಲಕ್ಷಣಗಳಿಲ್ಲ ಎಂಬುದು ಗೊತ್ತಾಗಿದೆ. ಇನ್ನೂ ಬಸವರಾಜ್ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದಾಗ ಕೋರ್ಟ್ ಮೆಟ್ಟಿಲೇರಿ ಕಳೆದ ಮೂರು ವರ್ಷಗಳಿಂದ 2 ಸಾವಿರ ಜೀವನ ಪರಿಹಾರ ಕೊಡುವಂತೆ ಮಾಡಿದ್ದಾನೆ. ಒಟ್ಟಾರೆ, ಬಸವರಾಜ್ ಮದುವೆಯಾದ ತಪ್ಪಿಗೆ ಕಳೆದ ಮೂರು ವರ್ಷಗಳಿಂದ ಕೋರ್ಟ್ ಗೆ ಅಲೆಯುತ್ತಿದ್ದಾನೆ. ಸಂಸಾರ ಸಂಕಷ್ಟದಿಂದ ಪಾರಾಗಲು ಹೆಣಗಾಡುತ್ತಿದ್ದಾನೆ.

Follow Us:
Download App:
  • android
  • ios