ಬೌರಿಂಗ್ ಲಾಕರ್ ನಂ. 69, 71, 78 ಪ್ರಕರಣದ ಇನ್ನೊಂದು ಗುಟ್ಟು ರಟ್ಟು!

Bowring Institute Locker Case Avinash is Presidents Relative
Highlights

  • ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ  ಪ್ರಕರಣಕ್ಕೆ ಬಿಗ್ ಟಿಸ್ಟ್ 
  • ಅವಿನಾಶ್ ಲಾಕರ್ ನಲ್ಲಿ  9.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆ
  • ಅವಿನಾಶ್ ನನ್ನು ಸದಸ್ಯತ್ವದಿಂದ ಉಚ್ಛಾಟನೆಗೊಳಿಸಲು ಬೌರಿಂಗ್ ಇನ್ ಸ್ಟಿಟ್ಯೂಟ್ ನ ಅಧ್ಯಕ್ಷರಿಂದಲೇ ವಿರೋಧ!

ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್ ಲಾಕರ್ವೊಂದರಲ್ಲಿ ಕೋಟಿ ಕೋಟಿ ಹಣ, ಚಿನ್ನ ಪತ್ತೆಯಾಗಿರುವ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಲಾಕರ್ ಮಾಲಕ ಅವಿನಾಶ್ ಅಮರ್ ಲಾಲ್ ಬೌರಿಂಗ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ರೂಪ್ ಗೂಕಲಾಣಿಯ ಸಂಬಂಧಿಯೆಂಬ ವಿಚಾರ ಇದೀಗ ಬಯಲಾಗಿದೆ.

ಅವಿನಾಶ್ ಅಮರಲಾಲ್, ರೂಪ್ ಗೂಕಲಾಣಿ ಪತ್ನಿಯ ಸಂಬಂಧಿಯಾಗಿದ್ದಾನೆ. ಈ ವಿಚಾರವನ್ನು ರೂಪ್ ಗೂಕಲಾಣಿ,  ಅವಿನಾಶ್‌ನನ್ನು ಸಂಸ್ಥೆಯ ಸದಸ್ಯತ್ವದಿಂದ ಉಚ್ಚಾಟನೆ ಮಾಡಲು ಸೋಮವಾರ ಮಧ್ಯಾಹ್ನ ಕರೆಯಲಾಗಿದ್ದ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ಅಲ್ಲದೇ, ಆತನನ್ನು ಉಚ್ಚಾಟನೆ ಮಾಡದಂತೆ ಅಧ್ಯಕ್ಷರು ಮತ್ತು ಅವರ ಕಡೆಯಿಂದ ಒತ್ತಡ ಕೂಡಾ ಹೇರಲಾಯಿತು.  ಈ ಕಾರಣದಿಂದ ಸಭೆಯು ಕೆಲ ಕಾಲ ಗೊಂದಲಗೂಡಾಗಿತ್ತು. ಆದರೆ ಬೌರಿಂಗ್ ಇನ್ಸ್ಟಿಟ್ಯೂಟ್ ಕಾರ್ಯದರ್ಶಿ ಶ್ರೀಕಾಂತ್ ಉಚ್ಛಾಟನೆಯ ನಿರ್ಧಾರ ಕೈಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಶೋಕಸ್ ನೋಟಿಸ್ ಜಾರಿ ಮಾಡಿ, ಉತ್ತರ ಬಂದ ಬಳಿಕ ಉಚ್ಚಾಟನೆ ಮಾಡುವುದಾಗಿ ನಿರ್ಧರಿಸಲಾಗಿದೆ. 

ಈ ಪ್ರಕರಣದಿಂದ ಬೌರಿಂಗ್ ಇನ್ಸ್ಟಿಟ್ಯೂಟ್ ಗೆ ಈಗಾಗಲೇ ಕೆಟ್ಟ ಹೆಸರು ಬಂದಿದೆ. ಈ ಹಿನ್ನಲೆ ಉಚ್ಚಾಟನೆ ಶತ ಸಿದ್ದ ಎಂದು ಶ್ರೀಕಾಂತ್ ಹೇಳಿದ್ದಾರೆ.

ಕಳೆದ ಶನಿವಾರ,  ಬೌರಿಂಗ್ ಇನ್ಸ್‌ಸ್ಟಿಟ್ಯೂಟ್ ಆಡಳಿತ ಮಂಡಳಿಯು, ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿಗೆ ಸೇರಿದ  ಲಾಕರನ್ನು ತೆರೆದಾಗ ಲಾಕರ್ ಒಳಗೆ 2 ಬ್ಯಾಗ್ ಪತ್ತೆಯಾಗಿದ್ದು, ಈ ಬ್ಯಾಗ್ ಗಳಲ್ಲಿ  9.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿತ್ತು.

ಲಾಕರ್ ಓಪನ್ ಮಾಡುತ್ತಿದ್ದಂತೆ ಗಾಬರಿಯಾಗಿ ಬೌರಿಂಗ್ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಈ ಹಣವನ್ನು ನೋಡಿದ ಬಳಿಕ ಪೊಲೀಸರೂ ಕೂಡ ಈ ಪ್ರಮಾಣದ ಭಾರೀ ಹಣ, ಆಭರಣ  ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು  ಐಟಿ ಇಲಾಖೆಗೆ ಮಾಹಿತಿ ನೀಡಿದ್ದರು.

loader