ಬೊಮ್ಮನಹಳ್ಳಿ: ನರೇಂದ್ರ ಮೋದಿಯವರ ಅಲೆಗೆ ದೇಶದ ಎಲ್ಲಾ ಪಕ್ಷಗಳು ಕೊಚ್ಚಿ ಹೋಗಿವೆ ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ.ಸತೀಶ್‌ ರೆಡ್ಡಿ ಹೇಳಿದರು.

ಕಾರ‍್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ‍್ಯ ಅವರ ಭರ್ಜರಿ ಗೆಲುಗೆ 65 ಸಾವಿರಕ್ಕೂ ಹೆಚ್ಚು ಮತಗಳನ್ನು ಬೊಮ್ಮನಹಳ್ಳಿ ಕ್ಷೇತ್ರದಿಂದ ನೀಡಿದ್ದು, ಕ್ಷೇತ್ರದ ಎಲ್ಲಾ ಜನತೆಗೆ ತಾನು ಅಭಾರಿಯಾಗಿರುತ್ತೇನೆ ಎಂದರು.

ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ನಾಯಕರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಸೈಯ್ಯದ್‌ ಸಲಾಂ, ರಾಮಚಂದ್ರ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ ರೆಡ್ಡಿ, ಮಾಜಿ ನಗರಸಭಾ ಸದಸ್ಯ ಚಂದ್ರಶೇಖರ್‌ ರೆಡ್ಡಿ ಇತರರಿದ್ದರು.