ಚೆನ್ನೈ, (ಅ. 02): ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ ಕಚೇರಿ ಹಾಗೂ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. 

 ಚೆನ್ನೈನ ಅಭಿರಾಮಪುರದಲ್ಲಿರುವ ನಿರ್ದೇಶಕ ಮಣಿರತ್ನಂ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ಬಾಂಬ್ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಬೆದರಿಕೆ ಹಿನ್ನಲೆಯಲ್ಲಿ ಮನೆಯಲ್ಲಿ ಇದ್ದ ಮಣಿರತ್ನಂ ಹಾಗೂ ಇತರರನ್ನು ಮನೆಯಿಂದ ಸ್ಥಳಾಂತರ ಮಾಡಲಾಗಿದ್ದು, ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳ ಬಾಂಬ್‌ಗಾಗಿ ಹುಡುಕಾಟ ನಡೆಸಿವೆ.

ಮಣಿರತ್ನಂ ಅವರು ನಿರ್ದೇಶಿಸಿದ್ದ 'ಚೆಕ್ಕ ಚಿವಂತ ವಾನಂ' ಎಂಬ ತಮಿಳು ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದರಲ್ಲಿನ ಸಂಭಾಷಣೆಯೊಂದು ವಿವಾದ ಸೃಷ್ಠಿಸಿರುವ ಕಾರಣ ಈ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಮಣಿರತ್ನಂ ಅವರು ಪೊಲೀಸ್ ಗೆ ದೂರು ನೀಡಿದ್ದಾರೆ.