ನಿನ್ನೆ ಸಂಜೆ ಮನೆ ಬಳಿ ಕಾರಿನಲ್ಲಿ ಬಂದವರು ನಿನ್ನ ಮಗನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಂತರ ತಡ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ'

ನೆಲಮಂಗಲ(ನ.27): ರೌಡಿ ಶೀಟರ್ ಬೆತ್ತನಗೆರೆ ಮಂಜನ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವ ಘಟನೆ ನೆಲಮಂಗಲ ಸಮೀಪದ ಬೆತ್ತನಗೆರೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಜನ ತಂದೆ ಹನುಮಂತರಾಯಪ್ಪ ಹಾಗೂ ತಾಯಿ ಕುಸುಮ ಮನೆಯಲ್ಲಿದ್ದ ವೇಳೆ ದಾಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ನಿನ್ನೆ ಸಂಜೆ ಮನೆ ಬಳಿ ಕಾರಿನಲ್ಲಿ ಬಂದವರು ನಿನ್ನ ಮಗನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಂತರ ತಡ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ' ಎಂದು ಮಂಜನ ತಂದೆ ಹನುಮಂತರಾಯಪ್ಪ ತಿಳಿಸಿದ್ದಾರೆ.

ಯಶವಂತಪುರ ಆಟೋ ಸ್ವಾಮಿ ಎಂಬುವನಿಂದ ಕೃತ್ಯ ನಡೆದಿದ್ದು ಎನ್ನಲಾಗಿದ್ದು, ಹಳೆ ವೈಶಮ್ಯದ ಹಿನ್ನಲೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.