ನವದೆಹಲಿ : ಬಾಲಿವುಡ್ ನಟ ಶಾಹಿದ್ ಕಪೂರ್ ಒಂದನೆ ಹಂತದ ಹೊಟ್ಟೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ಸುದ್ದಿಯಾಗುತ್ತಿದೆ. ಶಾಹಿದ್ ಕುಟುಂಬ ಮಾತ್ರ ಈ ಎಲ್ಲಾ  ಗಾಳಿ ಸುದ್ದಿಗಳನ್ನು ಅಲ್ಲಗಳೆದಿದೆ. 

ಈ ಬಗ್ಗೆ ಶಾಹಿದ್ ಕಪೂರ್ ಕುಟುಂಬ ಪ್ರತಿಕ್ರಿಯಿಸಿದ್ದು ಜನರು ಹೇಗೆ ಈ ರೀತಿ ಸುಳ್ಳು ಸುದ್ದಿಗಳನ್ನು ಬರೆಯುತ್ತಾರೆ. ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದ ಇಂತಹ ಸಂಗತಿಗಳ ಬಗ್ಗೆ ಹೇಗೆ ರೂಮರ್ಸ್ ಹರಡಿಸುತ್ತಾರೆ ಎಂದು ಹೇಳಿದ್ದಾರೆ. 

ಸದ್ಯ ಶಾಹಿದ್ ಕಪೂರ್ ಅರ್ಜುನ್ ರೆಡ್ಡಿ ರಿಮೇಕ್ ಚಿತ್ರವಾಗಿರುವ  ಕಬೀರ್ ಸಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಈ ಚಿತ್ರವನ್ನು ಸಂದೀಪ್ ವಾಂಗಾ ತಯಾರಿಸುತ್ತಿದ್ದು, 2017ರಲ್ಲಿ  ತೆಲುಗಿನಲ್ಲಿ ತಯಾರಾದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಸದ್ಯ ಇದರ ಹಿಂದಿ ವರ್ಷನ್ ಆಗಿರುವ ಕಬೀರ್ ಸಿಂಗ್ 2019ರ ಜೂನ್ 21ರಂದು ತೆರೆಗೆ ಅಪ್ಪಳಿಸಲಿದೆ. 

ಈ ಚಿತ್ರದಲ್ಲಿ ಶಾಹಿದ್ ಕಪೂರ್ ಗೆ ಕಿಯಾರ ಅಡ್ವಾಣಿ ಜೋಡಿಯಾಗಿ ನಟಿಸುತ್ತಿದ್ದಾರೆ.