ವಾಷಿಂಗ್ಟನ್​ [ಮಾ. 13] ಉಗ್ರರ ಮೇಲೆ ದಾಳಿ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದವರಿಗೆ ಪುರಾವೆ ಸಿಕ್ಕಿದೆ. ಅಮೆರಿಕ ಮೂಲದ ಕಾರ್ಯಕರ್ತನೊಬ್ಬ ನೀಡಿರುವ ಸಾಕ್ಷಿ ಹಲವರ ಬಾಯಿ ಮುಚ್ಚಿಸುತ್ತದೆಯೋ ಕಾದು ನೋಡಬೇಕು.

ಪಾಕಿಸ್ತಾನದ ಗಿಲ್ಗಿಟ್​ನಲ್ಲಿರುವ ಅಮೆರಿಕ ಮೂಲದ ಕಾರ್ಯಕರ್ತ ಸೆಂಗ್​ ಸಿರೀಂಗ್​ ಸೆರಿಂಗ್​ ಎಂಬಾತ ವೈಮಾನಿಕ ದಾಳಿ ಬಗ್ಗೆ ಮಾತನಾಡಿದ್ದು, ದಾಳಿಯ ಬಳಿಕ 200ಕ್ಕೂ ಹೆಚ್ಚು ಉಗ್ರರ ಮೃತದೇಹಗಳನ್ನು ಬಾಲಾಕೋಟ್​ನಿಂದ ಖೈಬರ್​ ಪಥುಂಕ್ವಾಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ದಾಳಿ, ಸಂಪೂರ್ಣ ವಿವರ

ಉಗ್ರರ ಮೃತದೇಹಗಳನ್ನು ಸ್ಥಳಾಂತರಿಸಿರುವ ಬಗ್ಗೆ ಉರ್ದು ಮಾಧ್ಯಮಗಳಲ್ಲಿ ವರದಿ ಮಾಡಿವೆ. ಪಾಕ್​ ಸೇನಾ ಅಧಿಕಾರಿಯು ದಾಳಿಯಲ್ಲಿ 200ಕ್ಕಿಂತ ಹೆಚ್ಚು ಉಗ್ರರು ಹತರಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ಆಧಾರ ಎಂಬಂತೆ ಪಾಕ್ ಸೈನಿಕರು ಉಗ್ರರ ಮಕ್ಕಳನ್ನು ಸಮಾಧಾನ ಪಡಿಸುತ್ತಿರುವ ದೃಶ್ಯಾವಳಿಯನ್ನು ಬಹಿರಂಗ ಮಾಡಲಾಗಿದೆ.