ಅಮೆರಿಕಾ ಸಂಗೀತ ಪರಂಪರೆಗೆ ಹೊಸ ನಾಂದಿ ಹಾಡಿರುವ ಖ್ಯಾತ ರಾಕ್ ಸಂಗೀತ ಮಾಂತ್ರಿಕ ಬಾಬ್ ಡೆಲಾನ್ 2016ರ  ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಮೆರಿಕಾ ಸಂಗೀತ ಪರಂಪರೆಗೆ ಹೊಸ ನಾಂದಿ ಹಾಡಿರುವ ಖ್ಯಾತ ರಾಕ್ ಸಂಗೀತ ಮಾಂತ್ರಿಕ ಬಾಬ್ ಡೆಲಾನ್ 2016ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರಾಕ್ ಸಂಗೀತಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಬಾಬ್ ಡೆಲಾನ್ ಸ್ವೀಡೀಷ್ ಅಕಾಡಮಿ ನೀಡುವ 8 ಮಿಲಿಯನ್ ಡಾಲರ್ ಮೊತ್ತದ ಸ್ವೀಡಿಸ್ ಕಿರೀಟ($927,740)ವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯಾರು ಈ ಬಾಬ್ ಡೆಲಾನ್:

ಬಾಬ್ ಡೆಲಾನ್ ಅಮೆರಿಕಾದ ದುಲತ್ ನಗರದವರು. ಮೇ.24, 1941ರಲ್ಲಿ ಯಹೂದಿ ಸಮುದಾಯದ ಮಧ್ಯವ ವರ್ಗದ ಕುಟುಂಬದಲ್ಲಿ ಜನಿಸಿದರು. ಆರಂಭದಿಂದಲೇ ಸಂಗೀತದ ಬಗ್ಗೆ ಒಲವಿದ್ದ ಬಾಬ್ ಹದಿಹರೆಯದ ವಯಸ್ಸಿನಲ್ಲೇ ವಿವಿಧ ಸಂಗೀತ ಉಪಕರಣಗಳನ್ನು ಬಳಸುವಲ್ಲಿ ಪ್ರವೀಣರಾಗಿದ್ದರು. ಅದರಲ್ಲೂ ಅಮೇರಿಕಾದ ಜಾನಪದ ಸಂಗೀತದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದ ಬಾಬ್ ಅದಕ್ಕೆ ನಂತರದ ದಿನಗಳಲ್ಲಿ ಹೊರ ಮೆರುಗನ್ನು ತಂದುಕೊಟ್ಟರು.

1962ರಲ್ಲಿ ಖ್ಯಾತ ನಿರ್ಮಾಪಕ ಜಾನ್ ಹ್ಯಾಮಾಂಡ್ ಸಹಯೋಗದಲ್ಲಿ ಬಾಬ್ ಡೆಲನ್ ಹೆಸರಿನಲ್ಲೇ ಚೊಚ್ಚಲ ಆಲ್ಬಮ್'ನ್ನು ಹೊರತಂದರು. ನಂತರ ಬಾಬ್ ತಿರುಗಿ ನೋಡಿದ್ದೇ ಇಲ್ಲ. 1965ರಲ್ಲಿ ಬ್ರಿಂಗಿಂಗ್ ಇಟ್ ಆಲ್ ಬ್ಯಾಕ್ ಹೋಂ ಅಂಡ್ ಹೈವೇ , 61, 1966ರಲ್ಲಿ ಬ್ಲಂಡೇ ಆನ್ ಬ್ಲಂಡೇ ಹೀಗೆ 2006ರಲ್ಲಿ ಮಾಡ್ರನ್ ಡೈಮ್ಸ್ ಹೀಗೆ ಹಲವಾರು ಆಲ್ಬಮ್'ಗಳು ಅವರನ್ನು ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಅನಾವರಣಗೊಂಡಿದೆ.

ಡೈನಾಮೇಟ್ ಕಂಡುಹಿಡಿದ ಅಲ್ಪ್ರೆಡ್ ನೊಬೆಲ್ ಹೆಸರಿನಲ್ಲಿ 1901ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ವಿಜ್ಞಾನ, ಸಾಹಿತ್ಯ, ಶಾಂತಿ, ಮುಂತಾದ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದವರಿಗೆ ಈ ಪ್ರಶ್ತಿಯನ್ನು ನೀಡಲಾಗುತ್ತದೆ.

ಸಾಹಿತ್ಯ ವಿಭಾಗಕ್ಕೆ ಕೊನೆಯದಾಗಿ ನೋಬೆಲ್ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.