ಡಿಪೋ ನಂಬರ್ 13ರ ವೋಲ್ವೋ ಬಸ್ ಚಾಲಕರಾಗಿದ್ದ ಚಾಲಕ ಬೊಮ್ಮೆಗೌಡ ಏರ್'ಪೋರ್ಟ್ ಕಡೆಗೆ ವಾಹನ ಚಲಾಯಿಸುತ್ತಿದ್ದರು.
ಬೆಂಗಳೂರು(ಜ.22): ಸೈಡ್ ಬಿಡದ ಕಾರಣಕ್ಕೆ ಬಿಎಂಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ರಾಘವೇಂದ್ರ ಮಠದ ಸಿಗ್ನಲ್ ಬಳಿ ನಡೆದಿದೆ.
ಬೊಮ್ಮೆಗೌಡ ಹಲ್ಲೆಗೊಳಗಾದ ಬಿಎಂಟಿಸಿ ಬಸ್ ಚಾಲಕ. ಡಿಪೋ ನಂಬರ್ 13ರ ವೋಲ್ವೋ ಬಸ್ ಚಾಲಕರಾಗಿದ್ದ ಚಾಲಕ ಬೊಮ್ಮೆಗೌಡ ಏರ್'ಪೋರ್ಟ್ ಕಡೆಗೆ ವಾಹನ ಚಲಾಯಿಸುತ್ತಿದ್ದರು.ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳು ಸಿಗ್ನಲ್ ಬಳಿಯಲ್ಲಿ ಸೈಡ್ ಬಿಟ್ಟಿಲ್ಲ ಎಂದು ಬಿಯರ್ ಬಾಟಲ್ ಗಳಲ್ಲಿ ಥಳಿಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
