ಉಡುಪಿಯಲ್ಲಿ ಬಿಜೆಪಿಗೆ ಭರ್ಜರಿ ಜಯ

BJP Won Udupi ZP Bypoll
Highlights

  • ಜೂ.14 ರಂದು ನಡೆದಿದ್ಧ ಉಪ ಚುನಾವಣೆ
  • ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 3360 ಅಂತರದಿಂದ ಗೆಲುವು

ಉಡುಪಿ[ಜೂ.17]: ಜಿಲ್ಲೆಯ ಕುಂದಾಪುರ ತಾಲೂಕು ಸಿದ್ದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕಾಗಿ ಜೂ.14 ರಂದು ನಡೆದಿದ್ಧ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಜಯಗಳಿಸಿದ್ದಾರೆ.

ಇಂದು ನಡೆದ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ ರೋಹಿತ್ ಕುಮಾರ್ ಶೆಟ್ಟಿ 11926 ಮತಗಳನ್ನು ಪಡೆಯುವುದರೊಂದಿಗೆ ಕಾಂಗ್ರೆಸಿನ ಪ್ರಸನ್ನ ಕುಮಾರ್ ಶೆಟ್ಟಿ ಅವರನ್ನು 3360 ಅಂತರದಿಂದ ಸೋಲಿಸಿದರು.

ಪ್ರಸನ್ನ ಅವರು 8566 ಮತ ಪಡೆದರೆ  ಜೆಡಿಎಸ್'ನ ಅರುಣ್ ಶೆಟ್ಟಿ 276 ಮತ ಪಡೆದರು. ನೋಟಾಗೆ 280 ಮತಗಳು ಬಿದ್ದಿದ್ದವು. ಚುನಾವಣೆಯಲ್ಲಿ ಒಟ್ಟು 21.048 ಮತ ಚಲಾವಣೆಯಾಗಿತ್ತು.

loader