ಉತ್ತರ ಪ್ರದೇಶ  ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ.  ಚುನಾವಣೆಯಲ್ಲಿ  ಬಿಜೆಪಿ ಭಾರೀ ಜಯಭೇರಿ ಬಾರಿಸಿದೆ.

ಉತ್ತರ ಪ್ರದೇಶ (ಡಿ.01): ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಚುನಾವಣೆಯಲ್ಲಿ ಬಿಜೆಪಿ ಭಾರೀಜಯಭೇರಿ ಬಾರಿಸಿದೆ.

ಅಲಹಾಬಾದ್, ಅಲಿಘರ್, ವಾರಣಾಸಿ, ಘಾಜಿಯಾಬಾದ್, ಗೋರಖ್'ಪುರ್, ಫಾಜಿಯಾಬಾದ್ ಮತ್ತು ಮೊರದಾಬಾದ್ ಮುನಿಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಬಿಜೆಪಿಯ ಈ ಗೆಲುವಿನ ಯಶಸ್ಸನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿದ್ದಾರೆ. ಮೋದಿಯವರ ದೂರದೃಷ್ಟಿಯ ಫಲ ಇದು ಎಂದು ಬಣ್ಣಿಸಿದ್ದಾರೆ. ಇದು ಮುಂಬರುವ ಗುಜರಾತ್ ಚುನಾವಣೆಗೆ ಮುನ್ನುಡಿ ಎಂದಿದ್ದಾರೆ.

ಮಾಯಾವತಿ ನೇತೃತ್ವದ ಬಿಎಸ್ಪಿ ಅಲಿಘರ್ ಮತ್ತು ಮೀರತ್'ನಲ್ಲಿ ಗೆಲುವನ್ನು ಸಾಧಿಸಿದೆ.

ನ. 22, 26 ಮತ್ತು 29 ರಂದು ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು.