ಮುಂದಿನ ಚುನಾವಣೆಯಲ್ಲಿ  ಬಿಜೆಪಿಯ 14 ವರ್ಷಗಳ ವನವಾಸ ಮುಕ್ತಾಯವಾಗಲಿದೆಯೆಂದು ಕೆಲವರು ಹೇಳುತ್ತಿದ್ದಾರೆ. ಇಲ್ಲಿ ವಿಷಯ ಬಿಜೆಪಿಯದ್ದು ಅಲ್ಲ, ಬದಲಾಗಿ 14 ವರ್ಷದಿಂದ ವನವಾಸದಲ್ಲಿರುವ ‘ಅಭಿವೃದ್ಧಿ’ಯದ್ದಾಗಿದೆ ಎಂದು ಮೋದಿ ಹೇಳಿದ್ದಾರೆ.

ಲಕ್ನೋ (ಜ.01): ಲಕ್ನೋವಿನಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ಅಭಿವೃದ್ಧಿಯ ವನವಾಸಕ್ಕೆ ಅಂತ್ಯಹಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯ 14 ವರ್ಷಗಳ ವನವಾಸ ಮುಕ್ತಾಯವಾಗಲಿದೆಯೆಂದು ಕೆಲವರು ಹೇಳುತ್ತಿದ್ದಾರೆ. ಇಲ್ಲಿ ವಿಷಯ ಬಿಜೆಪಿಯದ್ದು ಅಲ್ಲ, ಬದಲಾಗಿ 14 ವರ್ಷದಿಂದ ವನವಾಸದಲ್ಲಿರುವ ‘ಅಭಿವೃದ್ಧಿ’ಯದ್ದಾಗಿದೆ ಎಂದು ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಲ್ಲಾ ಪಕ್ಷಗಳು ತಮ್ಮದೇ ಆದ ಸಮಸ್ಯೆಗಳಲ್ಲಿ ಸಿಲುಕಿವೆ. ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ಪ್ರಧಾನಿ ಮೋದಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಿಎಸ್’ಪಿ ವಿರುದ್ಧ ಹರಿಹಾಯ್ದಿದ್ದಾರೆ.