ಸಿಎಂ ಸಿದ್ದರಾಮಯ್ಯ  ಸೇರಿದಂತೆ ಕಾಂಗ್ರೆಸ್ ಶಾಸಕರ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಸಿದ್ಧ ಮಾಡಿಕೊಂಡಿದೆ. ಸಿಎಂ ಮತ್ತು ಕಾಂಗ್ರೆಸ್ ಶಾಸಕರಿಗೆ ಶಾಕ್ ನೀಡಲು ಬಿಜೆಪಿ ಸಿದ್ಧವಾಗಿದೆ.

ಬೆಂಗಳೂರು (ಜ.02): ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಸಿದ್ಧ ಮಾಡಿಕೊಂಡಿದೆ. ಸಿಎಂ ಮತ್ತು ಕಾಂಗ್ರೆಸ್ ಶಾಸಕರಿಗೆ ಶಾಕ್ ನೀಡಲು ಬಿಜೆಪಿ ಸಿದ್ಧವಾಗಿದೆ.

Add Asianetnews Kannada as a Preferred SourcegooglePreferred

"ಹೇಳಿದ್ದೇನು? ಮಾಡಿದ್ದೇನು?" ಶೀರ್ಷಿಕೆಯಡಿ ರಾಜ್ಯ ಕಾಂಗ್ರೆಸ್ ಸರ್ಕಾರಗಳ ವೈಫ್ಯಲ್ಯ, ಅಕ್ರಮಗಳ ಪಟ್ಟಿಯನ್ನು ಸಿದ್ಧ ಮಾಡಿದೆ. ವಿಧಾನಸಭಾ ಕ್ಷೇತ್ರಾವಾರು ಚಾರ್ಜ್ ಶೀಟ್ ರೆಡಿಯಾಗಿದ್ದು, ಪ್ರಧಾನಿ ಮೋದಿಯಿಂದ ಬಿಡುಗಡೆ ಮಾಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ವರಿಷ್ಠರ ಸೂಚನೆಯಂತೆ ರಾಜ್ಯ ಬಿಜೆಪಿ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು ಜನವರಿ 28 ಕ್ಕೆ ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದೆ.

ಕಾಂಗ್ರೆಸ್ ಪಕ್ಷದ ಒಟ್ಟು 123 ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಿದ್ಧವಾಗಿದ್ದು, ಇಡೀ ರಾಜ್ಯ ವ್ಯಾಪ್ತಿಗೆ ಸೇರಿದಂತೆ ಒಂದು ಚಾರ್ಜ್ ಶೀಟ್, ಪ್ರತೀ ಕಾಂಗ್ರೆಸ್ ಶಾಸಕರ ಕ್ಷೇತ್ರವಾರು ಪ್ರತ್ಯೇಕ ಚಾರ್ಜ್ ಶೀಟ್ ರೆಡಿ ಮಾಡಿದ್ದಾರೆ.