'ಮುಸ್ಲಿಂ ಮುಕ್ತ ಭಾರತ ಮಾಡಲು ಬಿಜೆಪಿ ಹೊರಟಿದೆ'

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 9:53 PM IST
BJP Wants Muslim-Mukt Bharat says Asaduddin Owaisi
Highlights

ಬಿಜೆಪಿ ಮುಸ್ಲಿಂ ಮುಕ್ತ ಭಾರತ ಮಾಡಲು ಹೊರಟಿದೆ. ಅಲ್ಪಸಂಖ್ಯಾತರ ಬೆದರಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ. ಹೀಗಂತ ಹೇಳಿದ್ಯಾರು ಗೊತ್ತಾ? ಇಲ್ಲಿದೆ.

ಹೈದರಾಬಾದ್, [ನ.08]: ಬಿಜೆಪಿ ಟೀಕಿಸುವ ಭರದಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ತೆಲಂಗಾಣ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡಿದ ಓವೈಸಿ,  ಮೋದಿ ನೇತೃತ್ವದ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾದವರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿ ಮುಸ್ಲಿಂ ಮುಕ್ತ ಭಾರತ ಮಾಡಲು ಹೊರಟಿದೆ ಎಂದು ಆರೋಪಿಸಿದರು. 

ಇತ್ತೀಚೆಗೆ ತೆಲಂಗಾಣಕ್ಕೆ ಬಂದಿದ್ದ ಅಮಿತ್ ಶಾ, ಮಜ್ಲಿಸ್‌‌ ಮುಕ್ತ ಹೈದರಾಬಾದ್ ಮಾಡುತ್ತೇನೆ ಎಂದಿದ್ದಾರೆ. ಅಮಿತ್​ ಶಾ ಜೀ.. ನೀವು ಮಜ್ಲಿಸ್ ಮುಕ್ತ ಮಾಡುವ ಧ್ಯೇಯ ಹೊಂದಿಲ್ಲ. ಬದಲಿಗೆ ಮುಸ್ಲಿಂ ಮುಕ್ತ ಭಾರತ ಮಾಡುವ ಧ್ಯೇಯ ಹೊಂದಿದ್ದೀರಾ ಎಂದು ಅಮಿತ್​ ಶಾ ವಿರುದ್ಧ ಕಿಡಿಕಾರಿದರು.

loader