ಏಪ್ರಿಲ್ ಫೂಲ್‌ನ್ನು #pappudiwas ಎಂದು ಆಚರಿಸಿದ ಬಿಜೆಪಿ ಕಾರ್ಯಕರ್ತರು| ಇಂಧೋರ್ ಬಿಜೆಪಿ ಕಾರ್ಯಕರ್ತರಿಂದ ಆಲೂಗಡ್ಡೆ ಯಂತ್ರದ ಪ್ರಾತ್ಯಕ್ಷಿಕೆ| ಟ್ವಿಟ್ಟರ್ ನಲ್ಲಿ ಟ್ರೆಂಡ್ ಆದ #pappudiwas|
ಇಂಧೋರ್(ಏ.01): ಇಂದು ಏ.01. ಇಡೀ ವಿಶ್ವವೇ ಏಪ್ರಿಲ್ ಫೂಲ್ ದಿನವನ್ನು ಆಚರಿಸುತ್ತಿದೆ. ಆದರೆ ಇಂಧೋರ್ ನ ಬಿಜೆಪಿ ಕಾರ್ಯಕರ್ತರು ಮಾತ್ರ ಇಂದು ‘ಪಪ್ಪು ದಿನ’ವನ್ನು ಆಚರಿಸಿದ್ದಾರೆ.
ಇಂಧೋರ್ ಬಿಜೆಪಿ ಕಾರ್ಯಕರ್ತರು ಮೂರ್ಖರ ದಿನವಾದ ಏಪ್ರಿಲ್ 1ನ್ನು ರಾಹುಲ್ ಗಾಂಧಿ ದಿನವನ್ನಾಗಿ ಆಚರಿಸಿದ್ದಾರೆ.
ರಾಜವಾಡದಲ್ಲಿ ಬಿಜೆಪಿ ಕಾರ್ಯಕರ್ತರೋರ್ವರು ಒಂದು ಕಡೆ ಆಲೂಗಡ್ಡೆ ಹಾಕಿದರೆ ಮತ್ತೊಂದು ಕಡೆ ಚಿನ್ನ ಹೊರಬರುವ ಯಂತ್ರದ ಪ್ರಾತ್ಯಕ್ಷಿಕೆ ತೋರಿಸಿದರು. ಈ ವೇಳೆ ಓರ್ವ ರಾಹುಲ್ ಮುಖವಾಡ ಧರಿಸಿದ್ದರೆ ಇತರರು ಕಮಲನಾಥ್, ದಿಗ್ವಿಜಯ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ ಮುಖವಾಡ ಧರಿಸಿದ್ದರು.
ಫೋಟೋ ಶಾಪ್ ಮೂಲಕ ರಾಹುಲ್ ಅವರ ಭಾವಚಿತ್ರವನ್ನು ವಿವಿಧ ರೀತಿಯಲ್ಲಿ ಚಿತ್ರಿಸುವ ಮೂಲಕ, ರಾಹುಲ್ ವಿರೋಧಿಗಳು ಏಪ್ರಿಲ್ ಫೂಲ್‌ನ್ನು #pappudiwas ಎಂದು ಆಚರಿಸಿದ್ದಾರೆ.
ಇದಕ್ಕೂ ಮೊದಲು ಏಪ್ರಿಲ್ ಫೂಲ್ ನಿಮಿತ್ತ ಕಾಂಗ್ರೆಸ್ ‘ಮೋದಿ ಮತ್ ಬನಾವೋ’ ಎಂದು ಲೇವಡಿ ಮಾಡಿ ಟ್ವೀಟ್ ಮಾಡಿತ್ತು.
