ಕೋಟಿ – ಕೋಟಿ ರು.ಗೆ ಸೇಲ್ ಆಯ್ತಾ ಇಲ್ಲಿ ಟಿಕೆಟ್ : ಬಿಜೆಪಿ ಟಿಕೆಟ್ ಬಾಂಬ್

BJP Ticket Scam
Highlights

ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗಿದೆ.  ಈಗಾಗಲೇ ಅನೇಕರು ಅಸಮಾಧಾನಗೊಂಡಿದ್ದು, ಇದೀಗ ಟಿಕೆಟ್ ವಿಚಾರವಾಗಿ ದೊಡ್ಡ ಬಾಂಬ್ ಸಿಡಿಸಲಾಗಿದೆ.

ಬೆಂಗಳೂರು : ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗಿದೆ.  ಈಗಾಗಲೇ ಅನೇಕರು ಅಸಮಾಧಾನಗೊಂಡಿದ್ದು, ಇದೀಗ ಟಿಕೆಟ್ ವಿಚಾರವಾಗಿ ದೊಡ್ಡ ಬಾಂಬ್ ಸಿಡಿಸಲಾಗಿದೆ. ಚಿಕ್ಕಪೇಟೆ ಕ್ಷೇತ್ರದ ಟಿಕೆಟ್​ ಹಂಚಿಕೆಯಲ್ಲಿ ಕೋಟಿ, ಕೋಟಿ  ವ್ಯವಹಾರ ನಡೆಸಲಾಗಿದೆ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ. ಫೇಸ್ ಬುಕ್ ಬರಹವೊಂದು  ಇದಕ್ಕೆ ಇನ್ನಷ್ಟು ತುಪ್ಪ ಸುರಿದಿದೆ. ​

‘ಚಿಕ್ಕಪೇಟೆ ಬಿಜೆಪಿ ಟಿಕೆಟ್​ 2 ಕೋಟಿ ರೂಪಾಯಿಗೆ ಸೇಲ್ ಆಗಿದೆ’ ಎಂಬ ಆರೋಪ ಕೇಳಿ ಬಂದಿದೆ. ‘ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್​ 2 ಕೋಟಿಗೆ ಬಿಜೆಪಿ ಟಿಕೆಟ್ ಖರೀದಿಸಿದ್ದಾರೆ ಎಂದು ಫೇಸ್ ಬುಕ್ ಮೆಸೆಂಜರ್ ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

ಉದಯ್ ಗರುಡಾಚಾರ್ ಪರ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ಬ್ಯಾಟಿಂಗ್ ಮಾಡಿದ್ದು, ಉದಯ ಗರುಡಾಚಾರ್​ಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಸೂಚಿಸಿದ್ದರು ಎನ್ನಲಾಗಿದೆ.  ‘2 ಕೋಟಿ ಕೊಟ್ಟು ತಮ್ಮ ಎದುರಾಳಿಯನ್ನು ಆರ್. ವಿ. ದೇವರಾಜ್ ತಾವೇ ನಿರ್ಧರಿಸಿಕೊಂಡಿದ್ದಾರೆ ಎಂದು ಸುದ್ದಿ  ಫೇಸ್ ಬುಕ್ ಮೆಸೆಂಜರ್ ನಲ್ಲಿ ಹರಿದಾಡುತ್ತಿದೆ. ಎನ್.ಆರ್. ರಮೇಶ್​ಗೆ ಟಿಕೆಟ್ ಕೈತಪ್ಪಿದ್ದರ  ಹಿಂದೆ ಆರ್​.ವಿ.ದೇವರಾಜ್ ಕೈವಾಡ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

loader