ಬಿಜೆಪಿಯಲ್ಲಿ ನಂಬಿಕೆ ಇಟ್ಟು ಗೆಲ್ಲಿಸಿದ್ದಕ್ಕಾಗಿ ದಿಲ್ಲಿ ಜನತೆಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಬಿಜೆಪಿ ಗೆಲುವನ್ನು ಇತ್ತೀಚೆಗೆ ನಕ್ಸಲ್ ದಾಳಿಗೆ ಬಲಿಯಾದ ಸಿಆರ್'ಪಿಎಫ್ ಜವಾನರಿಗೆ ಅರ್ಪಿಸಿದ್ದಾರೆ.
ನವದೆಹಲಿ(ಏ. 26): ದೆಹಲಿ ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಭಾರಿಸಿದೆ. ರಾಜಧಾನಿಯ ಮೂರೂ ನಗರಪಾಲಿಕೆಗಳನ್ನು ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಉಳಿಸಿಕೊಂಡಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳೂ ನಿಜಗೊಂಡಿವೆ. ವಿಧಾನಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಪಕ್ಷ ಕೂಡ ನೆಲಕಚ್ಚಿದೆ.
ಮೂರು ಪಾಲಿಕೆಗಳನ್ನು ಸೇರಿ ಒಟ್ಟು 270 ಸ್ಥಾನಗಳ ಪೈಕಿ ಬಿಜೆಪಿ 185 ಕ್ಷೇತ್ರಗಳಲ್ಲಿ ಗೆದ್ದಿದೆ. ಆಮ್ ಆದ್ಮಿ ಮತ್ತು ಕಾಂಗ್ರೆಸ್ ತಲಾ 46 ಮತ್ತು 28 ಸ್ಥಾನಗಳಲ್ಲಿ ಜಯಸಿವೆ.
ಉತ್ತರ ದೆಹಲಿ ನಗರಪಾಲಿಕೆ, ದಕ್ಷಿಣ ದೆಹಲಿ ನಗರಪಾಲಿಕೆ ಮತ್ತು ಪೂರ್ವದೆಹಲಿ ನಗರಪಾಲಿಕೆ ಈ ಮೂರರಲ್ಲೂ ಬಿಜೆಪಿ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿಯಲ್ಲಿ ನಂಬಿಕೆ ಇಟ್ಟು ಗೆಲ್ಲಿಸಿದ್ದಕ್ಕಾಗಿ ದಿಲ್ಲಿ ಜನತೆಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಬಿಜೆಪಿ ಗೆಲುವನ್ನು ಇತ್ತೀಚೆಗೆ ನಕ್ಸಲ್ ದಾಳಿಗೆ ಬಲಿಯಾದ ಸಿಆರ್'ಪಿಎಫ್ ಜವಾನರಿಗೆ ಅರ್ಪಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ವೇಳೆ ಬಿಜೆಪಿಗೆ ಅಭಿನಂದನೆ ತಿಳಿಸಿದ್ದಾರೆ. ಮೂರು ನಗರಪಾಲಿಕೆಗಳ ಜೊತೆ ತಮ್ಮ ಸರಕಾರ ಸಹಕರಿಸಿ ದಿಲ್ಲಿಯ ಅಭಿವೃದ್ಧಿಗೆ ಪ್ರಯತ್ನಿಸುವುದು ಎಂದು ಜನತೆಗೆ ಭರವಸೆ ನೀಡಿದ್ದಾರೆ.
ದೆಹಲಿ ಮಹಾನಗರಪಾಲಿಕೆ ಚುನಾವಣೆ ವಿವರ:
ಒಟ್ಟು ಸ್ಥಾನಗಳು: 270
ಬಿಜೆಪಿ: 185
ಕಾಂಗ್ರೆಸ್: 28
ಎಎಪಿ: 46
ಇತರೆ: 11
ಉತ್ತರ ದೆಹಲಿ ಪಾಲಿಕೆ (103)
ಬಿಜೆಪಿ: 65
ಕಾಂಗ್ರೆಸ್: 13
ಎಎಪಿ: 22
ಇತರೆ: 03
ದಕ್ಷಿಣ ದೆಹಲಿ ಪಾಲಿಕೆ (103)
ಬಿಜೆಪಿ: 71
ಕಾಂಗ್ರೆಸ್: 12
ಎಎಪಿ: 15
ಇತರೆ: 06
ಪೂರ್ವ ದೆಹಲಿ ಪಾಲಿಕೆ (103)
ಬಿಜೆಪಿ: 49
ಕಾಂಗ್ರೆಸ್: 03
ಎಎಪಿ: 09
ಇತರೆ: 02
