ಜೈಲಿಗೆ ಹೋದ ತಂದೆ ಬಿಡಿಸಿಕೊಳ್ಳಲು 'ಮಹಾ' ದುಷ್ಯಂತ್ ಯಾರು?: ಶಿವಸೇನೆ!
ಮಹಾರಾಷ್ಟ್ರದಲ್ಲಿ ಮುಂದುವರೆದ ಬಿಜೆಪಿ-ಶಿವಸೇನೆ ವೈಮನಸ್ಸು| ಶಿವಸೇನೆ ಪಟ್ಟಿನಿಂದಾಗಿ ಸರ್ಕಾರ ರಚನೆ ಮತ್ತಷ್ಟು ಕಗ್ಗಂಟು| 50-50 ಮಾದರಿಯ ಸರ್ಕಾರ ರಚನೆಗೆ ಪಟ್ಟು ಹಿಡಿದಿರುವ ಶಿವಸೇನೆ| ಹರಿಯಾಣದಲ್ಲಿ ಆದಂತೆ ಮಹಾರಾಷ್ಟ್ರದಲ್ಲಿ ಆಗಲು ಸಾಧ್ಯವಿಲ್ಲ ಎಂದ ಶಿವಸೇನೆ| ಮಹಾರಾಷ್ಟ್ರದಲ್ಲಿ ಎಲ್ಲರೂ ಧರ್ಮ ಹಾಗೂ ಸತ್ಯದ ರಾಜಕಾರಣ ಮಾಡುತ್ತಾರೆ ಎಂದ ಸಂಜಯ್ ರಾವುತ್| 50-50 ಮಾತುಕತೆಯೇ ಆಗಿಲ್ಲ ಎಂದ ದೇವೇಂದ್ರ ಫಡ್ನವೀಸ್|
ಮುಂಬೈ(ಅ.29): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ-ಶಿವಸೇನೆ ನಡುವೆ ಇನ್ನೂ ಗೊಂದಲ ಮುಂದುವರೆದಿದ್ದು, ಶಿವಸೇನೆ ತನ್ನ ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಪಟ್ಟು ಹಿಡಿದಿದೆ.
50-50ಕ್ಕೆ ಲಿಖಿತ ಭರವಸೆ ಕೊಡಿ: ಅಪನಂಬಿಕೆಯ ಹಗ್ಗದ ಮೇಲೆ ಬಿಜೆಪಿ-ಶಿವಸೇನೆ ಜೋಡಿ!
ಬಿಜೆಪಿ ಹೇಳಿದಂತೆ ಕೇಳಲು ಮಹಾರಾಷ್ಟ್ರದಲ್ಲಿ ದುಷ್ಯಂತ್ ಚೌಟಾಲಾ ಇಲ್ಲ ಎಂದು ಶಿವಸೇನೆ ಚಾಟಿ ಬೀಸಿದೆ. ತಂದೆ ಜೈಲಿನಲ್ಲಿರುವ ದುಷ್ಯಂತ್ ಮಹಾರಾಷ್ಟ್ರದಲ್ಲಿ ಯಾರೂ ಇಲ್ಲ ಎಂದು ಶಿವಸೇನೆ ವ್ಯಂಗ್ಯವಾಡಿದೆ.
ಶಿವಸೇನೆ ಯಾವಾಗಲೂ ಧರ್ಮ ಮತ್ತು ಸತ್ಯದ ರಾಜಕಾರಣ ಮಾಡುತ್ತದೆ ಎಂದಿರುವ ಶಿವಸೇನೆ ನಾಯಕ ಸಂಜಯ್ ರಾವುತ್, ಸರ್ಕಾರ ರಚನೆಯಲ್ಲಿ ಉಂಟಾಗುತ್ತಿರುವ ವಿಳಂಬದ ಕುರಿತು ಕೇಳಲಾದ ಪ್ರಶ್ನೆಗೆ ಹರಿಯಾಣ ಸರ್ಕಾರ ರಚನೆಯ ಮಾತುಕತೆಯನ್ನು ಪ್ರಸ್ತಾಪಿಸಿದರು.
ಮಹಾರಾಷ್ಟ್ರದಲ್ಲಿ ಬಹುಮತವಿದ್ದರೂ ಸರ್ಕಾರ ರಚಿಸಿಲು ಒದ್ದಾಡುತ್ತಿದೆ ಬಿಜೆಪಿ
ಮಹಾರಾಷ್ಟ್ರದಲ್ಲಿ ತಂದೆ ಜೈಲಿನಲ್ಲಿರುವ ದುಷ್ಯಂತ್ ಯಾರೂ ಇಲ್ಲ ಎಂದಿರುವ ಸಂಜಯ್, ಸಂಕೀರ್ಣ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಎಲ್ಲರೂ ಧರ್ಮ ಹಾಗೂ ಸತ್ಯದ ರಾಜಕಾರಣ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
"
50-50 ಮಾತುಕತೆಯೇ ಆಗಿಲ್ಲ ಎಂದ ಫಡ್ನವೀಸ್:
ಇನ್ನು ಶಿವಸೇನೆ ಪ್ರಸ್ತಾಪಿಸುತ್ತಿರುವ 50-50 ಮಾದರಿಯ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಚುನಾವಣೆಗೂ ಮೊದಲು ಈ ರೀತಿಯ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಎರಡುವರೆ ವರ್ಷಗಳ ಬಳಿಕ ಶಿವಸೇನೆಗೆ ಅಧಿಕಾರ ಬಿಟ್ಟುಕೊಡುವ ಸಾಧ್ಯತೆಯನ್ನು ಬಿಜೆಪಿ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಫಡ್ನವೀಸ್ ಅವರ ಮಾತಿನಿಂದ ಮತ್ತಷ್ಟು ಕೆರಳಿರುವ ಶಿವಸೇನೆ, ಸರ್ಕಾರ ರಚನೆ ಹೇಗೆ ನಡೆಯುತ್ತದೆ ಎಂಬುದನ್ನು ನಾವೂ ನೋಡುತ್ತೇವೆ ಎಂದು ಬೆದರಿಕೆಯೊಡ್ಡಿದೆ.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ