ಬಿಜೆಪಿಯ ಹಿರಿಯ ಮುಖಂಡ ಬಿಬಿ ಶಿವಪ್ಪ ಇಹಲೋಕ ತ್ಯಜಿಸಿದರು. ಬಹು ಅಂಗ ವೈಫಲ್ಯದಿಂದ ಅವರು ಇಂದು ಸೋಮವಾರ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತಕ್ಕೊಳಗಾಗಿ ಅವರು ಏಪ್ರಿಲ್ ತಿಂಗಳಿನಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಬೆಂಗಳೂರು(ಜುಲೈ 31): ಬಿಜೆಪಿಯ ಹಿರಿಯ ಮುಖಂಡ ಬಿಬಿ ಶಿವಪ್ಪ ಇಹಲೋಕ ತ್ಯಜಿಸಿದರು. ಬಹು ಅಂಗ ವೈಫಲ್ಯದಿಂದ ಅವರು ಇಂದು ಸೋಮವಾರ ರಾಜಾಜಿನಗರದಲ್ಲಿರುವ ಸುಗುಣ ಅಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತಕ್ಕೊಳಗಾಗಿ ಅವರು ಏಪ್ರಿಲ್ ತಿಂಗಳಿನಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಹಾಸನದಲ್ಲಿ ಬಿಜೆಪಿಯ ಪರಮೋಚ್ಚ ಮುಖಂಡರೆನಿಸಿದ್ದ ಬಿಬಿ ಶಿವಪ್ಪ 3 ಬಾರಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಕಲೇಶಪುರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಕಾರ್ಯವೈಖರಿಯನ್ನು ವಿರೋಧಿಸಿದ್ದರು. ಸಮಾನ ಮನಸ್ಕ ಬಿಜೆಪಿ ಹಿರಿಯರ ವೇದಿಕೆ ಕಟ್ಟಿ ಪಕ್ಷದ ಪುನರುತ್ಥಾನಕ್ಕೆ ಪ್ರಯತ್ನಿಸಿದ್ದರು. ಆದರೆ, ಅದರಲ್ಲಿ ಅವರಿಗೆ ಹೆಚ್ಚು ಸಫಲತೆ ಸಿಗಲಿಲ್ಲವೆನ್ನಲಾಗಿದೆ.
ಇದೇ ವೇಳೆ, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಮುಖಂಡರು ಶಿವಪ್ಪ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
