ರಾಹುಲ್ ಗಾಂಧಿಗೆ ಸ್ವಲ್ಪವೂ ತಾಂತ್ರಿಕ ಜ್ಞಾನವಿಲ್ಲ : ಬಿಜೆಪಿ ಮುಖಂಡರ ಟಾಂಗ್

BJP says Rahul Gandhi has zero tech knowledge
Highlights

ನಮೋ ಆ್ಯಪ್ ಮೂಲಕ ಸಂಪೂರ್ಣ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದ ಬೆನ್ನಲ್ಲೇ ನಿನ್ನೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ನಾನು ಪ್ರಧಾನಿ ನರೇಂದ್ರ ಮೋದಿ  ನಿಮ್ಮ ಎಲ್ಲಾ ಖಾಸಗಿ ಮಾಹಿತಿಗಳನ್ನೂ ಕೂಡ ನಾನು ನನ್ನ ಅಮೆರಿಕ ಗೆಳೆಯರಿಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದರು.

ನವದೆಹಲಿ : ನಮೋ ಆ್ಯಪ್ ಮೂಲಕ ಸಂಪೂರ್ಣ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದ ಬೆನ್ನಲ್ಲೇ ನಿನ್ನೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ನಾನು ಪ್ರಧಾನಿ ನರೇಂದ್ರ ಮೋದಿ  ನಿಮ್ಮ ಎಲ್ಲಾ ಖಾಸಗಿ ಮಾಹಿತಿಗಳನ್ನೂ ಕೂಡ ನಾನು ನನ್ನ ಅಮೆರಿಕ ಗೆಳೆಯರಿಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದರು.

 ಈ ರೀತಿಯಾಗಿ ಟ್ವೀಟ್ ಮಾಡಿದ್ದ ರಾಹುಲ್’ಗೆ ಇದೀಗ ಬಿಜೆಪಿ ಮುಖಂಡರು ಟಾಂಗ್ ನೀಡಿದ್ದಾರೆ.  ರಾಹುಲ್ ಗಾಂಧಿಗೆ  ಯಾವುದೇ ರೀತಿಯಾದ ತಂತ್ರಜ್ಞಾನ ಬಗ್ಗೆ ಜ್ಞಾನವಿಲ್ಲ. ಅವರ ತಾಂತ್ರಿಕ ಜ್ಞಾನ ಸೊನ್ನೆಯಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಮೋದಿ ಮೊಬೈಲ್‌ ಆ್ಯಪ್‌ನ ವೈಯಕ್ತಿಕ ದತ್ತಾಂಶಗಳಾದ ಇಮೇಲ್‌ ಐಡಿ, ಫೋಟೋಗಳು, ಲಿಂಗ ಮತ್ತು ಬಳಕೆದಾರರ ಹೆಸರುಗಳನ್ನು ಮೂರನೇ ವ್ಯಕ್ತಿಯೊಬ್ಬರಿಗೆ ಕಳುಹಿಸಲಾಗಿದೆ ಎಂದು ಫಾನ್ಸ್‌ನ ಹ್ಯಾಕರ್‌ವೊಬ್ಬರು ಸರಣಿ ಟ್ವೀಟ್‌ಗಳ ಮೂಲಕ ಆರೋಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ರಾಹುಲ್‌ ಬಹಿರಂಗಪಡಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌, ಕೇಂಬ್ರಿಜ್‌ ಅನಾಲಿಟಿಕಾ ಕಂಪನಿಯನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ, ರಾಹುಲ್‌ ಹೇಳಿಕೆ ಹೊರಬಿದ್ದಿತ್ತು. ಇದೀಗ ರಾಹುಲ್ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ.

loader