’ಲೆಕ್ಕ ಕೊಡಿ’ ಶೀರ್ಷಿಕೆಯಡಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಚಾರ್ಜ್’ಶೀಟ್ ಬಿಡುಗಡೆ

First Published 1, Mar 2018, 1:30 PM IST
BJP released Chargesheet agains Congress
Highlights

’ಲೆಕ್ಕ ಕೊಡಿ’ ಎನ್ನುವ ಶೀರ್ಷಿಕೆಯಡಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಚಾರ್ಜ್’ಶೀಟ್ ಬಿಡುಗಡೆ ಮಾಡಿದೆ. 

ಬೆಂಗಳೂರು (ಮಾ. 01): ’ಲೆಕ್ಕ ಕೊಡಿ’ ಎನ್ನುವ ಶೀರ್ಷಿಕೆಯಡಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಚಾರ್ಜ್’ಶೀಟ್ ಬಿಡುಗಡೆ ಮಾಡಿದೆ. 

ರಾಜ್ಯದಲ್ಲಿ ಗೂಂಡಾರಾಜ್ಯ ನಡೆಯುತ್ತಿದೆ.  ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಯಾಗಿ ಬದಲಾಗಿದೆ. ಬೆಂಗಳೂರು ಒಳ್ಳೆಯದಕ್ಕೆ ಹೆಸರಾಗಿತ್ತು, ಆದರೆ ಈಗ ಸಂಪೂರ್ಣ ವಿರುದ್ಧವಾಗಿದೆ
ಅದನ್ನೇ ಈ ಛಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದೇವೆ. ಜೊತೆಗೆ  ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣ, ನಾರಾಯಣ ಸ್ವಾಮಿ ಪ್ರಕರಣ ಉಲ್ಲೇಖ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. 
ನಾಳೆಯಿಂದ ಪಾದಯಾತ್ರೆ ನಡೆಸುತ್ತೇವೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹಾಳುಗಡವಿದೆ.  ಹೀಗಾಗಿ ಬೆಂಗಳೂರು ರಕ್ಷಿಸಿ  ಪಾದಯಾತ್ರೆ ನಡೆಸುತ್ತಿದ್ದೇವೆ.  ಶಾಂತಿಯ ಬೆಂಗಳೂರು ಈಗ ಗೂಂಡಾಗಿರಿಯ ಬೆಂಗಳೂರಾಗಿ ಪರಿವರ್ತನೆ ಆಗಿದೆ. ಕೊಲೆ ನಡೆದ ನಂತರವೂ ಗೃಹ ಸಚಿವರು ಹೇಳ್ತಾರೆ, ಸ್ಕ್ರೂ ಡ್ರೈವರ್’ನಿಂದ ಚುಚ್ಚಿದ್ದಷ್ಟೇ ಎಂದು. ಇಂತಹ ಗೃಹ ಸಚಿವರನ್ನು ದೇಶದಲ್ಲೇ ಎಲ್ಲೂ ನೋಡಿಲ್ಲ ಎಂದು ಜಾವಡೇಕರ್ ವಾಗ್ದಾಳಿ ನಡೆಸಿದರು. 
ಕಾಂಗ್ರೆಸ್ ಸರಕಾರದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಅವ್ಯವಸ್ಥೆ ವಿರುದ್ಧ ನಾವು ನಾಳೆಯಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಸಲಿದ್ದೇವೆ ಎಂದು ಜಾವಡೇಕರ್ ಹೇಳಿದ್ದಾರೆ.  

loader