ಭೋಪಾಲ್(ಸೆ.18): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನ, ಮಂದಿರ ಸುತ್ತುವ ನಾಟಕ ನಿಲ್ಲಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರಭಾತ್ ಜಾ ತಿರುಗೇಟು ನೀಡಿದ್ದಾರೆ.

ಶಿವಭಕ್ತ ನಾಟವಾಡುತ್ತಿರುವ ರಾಹುಲ್ ಗಾಂಧಿ, ಇದೀಗ ಹಿಂದೂ ಮತಗಳನ್ನ ಒಲೈಸಿಕೊಳ್ಳಲು ದೇವಸ್ಥಾನ, ಪೂಜೆಗಳತ್ತ ಮುಖಮಾಡಿದ್ದಾರೆ. ಈ  ರೀತಿ ನಾಟಕಾವಡೋ ಬದಲು ತಾಕತ್ತಿದ್ದರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಬೆಂಬಲಿಸಲಿ ಎಂದು ಪ್ರಭಾತ್ ಜಾ ಹೇಳಿದ್ದಾರೆ.

ರಾಹುಲ್ ಗಾಂಧಿಯ ಟೆಂಪಲ್ ನಾಟಕವನ್ನ ದೇವರು ಸಹಿಸಲ್ಲ.  ಚುನಾವಣೆ ಸಮೀಪಿಸುತ್ತಿದ್ದಂತೆ ಭಕ್ತಿ ಪ್ರಕಟಿಸುವ ರಾಹುಲ್ ಗಾಂಧಿಗೆ ತಕ್ಕ ಶಾಸ್ತಿಯಾಗಲಿದೆ ಎಂದಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ರ್ಯಾಲಿ ಬಳಿಕ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಪ್ರಬಾತ್ ಜಾ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.