ಬೆಂಗಳೂರು (ಸೆ.26): ಕೆ.ಜೆ ಜಾರ್ಜ್ ರವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಭಾರತೀಯ ಜನತಾ ಪಕ್ಷ ಪ್ರಶ್ನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೋಲಿಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಭಾಗಿಯಾಗಿಲ್ಲವೆಂದು ನ್ಯಾಯಾಲಯ ಇನ್ನೂ ತೀರ್ಪು ಕೊಟ್ಟಿಲ್ಲ. ಗಣಪತಿ ಆತ್ಮಹತ್ಯೆ ನಂತರ ನಡೆದಿರುವ ಎಲ್ಲಾ ಬೆಳವಣಿಗೆಗಳು ನಾಟಕೀಯವಾಗಿದೆ. ಸಿಐಡಿ ವರದಿ ಕೂಡಾ ಜಾರ್ಜ್ ಪ್ರಭಾವಿತವಾಗಿದೆ.

ಸಿಐಡಿ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆಯಷ್ಟೇ. ನ್ಯಾಯಾಲಯ ಇನ್ನೂ ತೀರ್ಪು ಕೊಟ್ಟಿಲ್ಲ. ಇಷ್ಟು ಆತುರಾತುರವಾಗಿ ಜಾರ್ಜ್’ರವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಗೋ, ಮಧುಸೂದನ್ ಪ್ರಶ್ನಿಸಿದ್ದಾರೆ.