ನವದೆಹಲಿ[ಆ.9] ಸನ್ಮಾನ್ಯ ರಾಹುಲ್ ಗಾಂಧಿಯವರೆ ನಿಮ್ಮ ಬಳಿ ಸಮಯವಿದ್ದರೆ ಮೋದಿ ದಲಿತ ವಿರೋಧಿ ಎನ್ನುವುದಕ್ಕೆ ಒಂದಿಷ್ಟು ಸಾಕ್ಷ್ಯ ಒದಗಿಸಿ ಎಂದು ಸವಾಲು ಹಾಕಿದ್ದಾರೆ.

ಎಸ್ಸಿ ಮತ್ತು ಎಸ್ಟಿ ಗಳಿಗೆ ನ್ಯಾಯ ಒದಗಿಸಲು ಮಸೂದೆ ಮಂಡನೆಗೆ ಮುಂದಾದರೆ ನೀವು ಅದನ್ನು  ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದೀರಿ. ನಿಜವಾಗಿಯೂ ದಲಿತರಿಗೆ ಅವಹೇಳನ ಮಾಡುತ್ತಿರುವವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ರಾಹುಲ್ ಪ್ರತಿಭಟನೆಗೆ ಕುಳಿತ ನಂತರ ಅಮಿತ್ ಶಾ ಆಕ್ರೋಶ ಸ್ಫೋಟವಾಗಿದೆ. ಸರಣಿ ಟ್ವೀಟ್ ಗಳನ್ನು ಮಾಡಿರುವ ಶಾ ರಾಹುಲ್ ಗೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ.

ನಿಜವಾಗಿಯೂ ದಲಿತರನ್ನು ತುಳಿದುಕೊಂಡು ಬಂದಿರುವವರು ನೀವು. ಎನ್ ಡಿಎ ಮತ್ತು ಯುಪಿಎ ಸರಕಾರದಲ್ಲಿ ದಲಿತರಿಗೆ ಕೊಡಮಾಡಿದ ಸೌಲಭ್ಯಗಳನ್ನು ಬೇಕಾದರೆ ಲೆಕ್ಕ ಹಾಕಿ. ಸತ್ಯ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.