ಬಿಜೆಪಿಯ ಬೆಂಬಲದಿಂದ ಪದ್ಮಾವತಿ ವಿರುದ್ಧ ಪ್ರತಿಭಟನೆ ಪ್ರತಿಭಟನಾಕಾರರನ್ನು ಕೆಂಪುಹಾಸು ಹಾಕಿ ಸ್ವಾಗತಿಸಿದ್ದು ಖುದ್ದು ಬಿಜೆಪಿ

ಹೈದರಾಬಾದ್: ಪದ್ಮಾವತ್ ಚಿತ್ರ ಬಿಡುಗಡೆಗೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ, ಬಿಜೆಪಿಯು ‘ಪಕೋಡಾ’ ರಾಜಕೀಯ ಮಾಡುತ್ತಿದೆಯೆಂದು ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪದ್ಮಾವತಿ ಚಿತ್ರವನ್ನು ಪ್ರತಿಭಟಿಸುತ್ತಿರುವವರನ್ನು ಕೆಂಪು ಹಾಸಿ ಸ್ವಾಗತಿಸಿದ್ದು ಖುದ್ದು ಪ್ರಧಾನಿ ಮೋದಿ ಹಾಗೂ ಬಿಜೆಪಿ. ಈಗ ಆ ಮಂದಿ ಕಾನೂನನ್ನು ಮೀರಿ ಬೆಳೆದಿದ್ದಾರೆ, ಮಕ್ಕಳ ಮೇಲೆ ಹಲ್ಲೆ ನಡೆಸಿ ಆಸ್ತಿ-ಪಾಸ್ತಿಗಳಿಗೆ ಬೆಂಕಿಯಿಡುತ್ತಿದ್ದಾರೆ. ಇದೆಲ್ಲವೂ ಬಿಜೆಪಿಯ ‘ಜಾಣ’ ಬೆಂಬಲದಿಂದ ನಡೆಯುತ್ತಿದೆ. ಬಿಜೆಪಿಯದ್ದು ಇದೊಂದು ಪಕೋಡಾ ರಾಜಕೀಯ, ಎಂದು ಒವೈಸಿ ಕಿಡಿಕಾರಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ, ಪಕೋಡಾ ಮಾರಿ ರೂ.200 ಸಂಪಾದನೆ ಮಾಡುವುದು ಕೂಡಾ ಉದ್ಯೋಗವೇ ಎಂದಿದ್ದರು. ಆ ಬಳಿಕ ಪ್ರತಿಪಕ್ಷಗಳು ಅದನ್ನೇ ಮೋದಿ ವಿರುದ್ಧ ಅಸ್ತ್ರವಾಗಿ ಮೋದಿ ಬಳಸುತ್ತಿವೆ.