ನವದೆಹಲಿ[ಆ.11]: ಸೋನಿಯಾ ಗಾಂಧಿಯನ್ನು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಸುಮಾರು 12 ಗಂಟೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿಗೆ ರಾಜೀನಾಮೆ ಹಿಂಪಡೆಯಲು ಒತ್ತಾಯ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಸೋನಿಯಾ ಅಧ್ಯಕ್ಷೆಯಾಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನಾಯಕ 7 ಸೆಕೆಂಡ್ ವಿಡಿಯೋ ಒಂದನ್ನು ಶೇರ್ ಮಾಡಿ ಕಾಂಗ್ರೆಸ್ ನ ಈ ನಿರ್ಧಾರದ ಕುರಿತು ವ್ಯಂಗ್ಯವಾಡಿದ್ದಾರೆ.

12 ಗಂಟೆ ಮೀಟಿಂಗ್: ಸೋನಿಯಾ ಮತ್ತೆ ಕೈ ಸಾರಥಿಯಾಗಿದ್ದು ಹೇಗೆ? ಇನ್‌ಸೈಡ್ ಸ್ಟೋರಿ!

ಹೌದು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ವಿಡಿಯೋ ಒಂದನ್ನು ಶೇರ್ ಮಾಡುತ್ತಾ ಕಾಂಗ್ರೆಸ್ ಕುಟುಂಬ ರಾಜಕೀಯ ನಡೆಸುತ್ತಿದೆ ಎಂಬ ಸಂದೇಶ ನೀಡಿದ್ದಾರೆ. 2017ರಲ್ಲಿ ತೆರೆಕಂಡ 'ಇಂದು ಸರ್ಕಾರ್' ಸಿನಿಮಾದ ಡೈಲಾಗ್ ಒಂದನ್ನು ಟ್ವೀಟ್ ಮಾಡುತ್ತಾ ಸೋನಿಯಾ ಗಾಂಧಿ ಆಯ್ಕೆಯನ್ನು ಟೀಕಿಸಿದ್ದಾರೆ.

ನಿನ್ನೆ ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆದಿತ್ತು. ಸುದೀರ್ಘ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಯಾರು ಎಂಬ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಾತ್ರಿ 8.30ಕ್ಕೆ 5 ಉಪಸಮಿತಿಗಳನ್ನು ರಚಿಸಿ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಬಳಿಕ ಚರ್ಚೆ ನಡೆಸಿ ಅಂತಿಮವಾಗಿ ಸೋನಿಯಾ ಗಾಂಧಿಯನ್ನೇ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿತ್ತು.