ಲಕ್ನೋ[ಜು.23] ಬಿಎಸ್ ಪಿ ಮತ್ತು  ಎಸ್ ಪಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದರೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. 

ಬಿಜೆಪಿಯೂ ಕೂಡ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.  ಬಿಜೆಪಿಯ ಹಿರಿಯ ನಾಯಕರು ಯಾವ ರೀತಿಯಾಗಿ ಚುನಾವಣೆ ಎದುರಿಸಿದರೆ ಗೆಲುವು ಸಾಧ್ಯ ಎನ್ನುವುದರತ್ತ ತಮ್ಮ ಚಿತ್ರ ಹರಿಸಿದ್ದಾರೆ.  ರಾಜ್ಯದಲ್ಲಿ ಅತ್ಯಂತ ಸಮರ್ಥ ನಾಯಕರನ್ನು ಕಣಕ್ಕಿಳಿಸಿದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರುವುದು ಸಮಸ್ಯೆಯಾಗದು ಎನ್ನುವ ನಿರ್ಧಾರಕ್ಕೆ ಬಂದಿದ್ದು ಯಾವ ಕ್ಷೇತ್ರದ ಹೊಣೆಗಾರಿಕೆ ಯಾರಿಗೆ ನೀಡಬೇಕು ಎಂಬುದನ್ನು ಬಿಜೆಪಿ ಹಿರಿಯ ನಾಯಕರು ಚಿಂತನೆ ನಡೆಸಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರು ಬಿಜೆಪಿ ಸರಕಾರದ ಪ್ರಮುಖ ಮಂತ್ರಿಗಳಿಗೆ ಜವಾಬ್ದಾರಿ ವಹಿಸಲಾಗುತ್ತಿದೆ. ಸತೀಶ್ ಮಹನ್ನಾ, ಎಸ್.ಪಿ.ಸಾಹಿ, ದಾರಾ ಸಿಂಗ್ ಚೌಹಾಣ್ ಅಂಥವರಿಗೆ ನಿರ್ದಿಷ್ಟ ಕ್ಷೇತ್ರದ ಜವಾಬ್ದಾರಿ ವಹಿಸಿಕೊಡಲಾಗುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಅತಿ ಹೆಚ್ಚಿನ ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಪ್ರತಿಯೊಂದು ಪಕ್ಷಕ್ಕೂ ಪ್ರಮುಖವಾಗುತ್ತದೆ.