ಕರ್ನಾಟಕದಲ್ಲಿ ಗೆಲುವಿಗೆ ಮಾಸ್ಟರ್ ಪ್ಲಾನ್ : ಹೊಸ ಘೋಷಣೆಯೊಂದಿಗೆ ಹೊರಟಿದೆ ಬಿಜೆಪಿ

BJP Plan To Win In Karnataka Election
Highlights

ತ್ರಿಪುರದಲ್ಲಿ ಎಡರಂಗದ 25 ವರ್ಷಗಳ ಆಡಳಿತವನ್ನು ಕೊನೆಗಾಣಿಸಿ ಕೇಸರಿ ಧ್ವಜ ನೆಟ್ಟಿರುವ ಬಿಜೆಪಿ ಇದೀಗ ತನ್ನ ಸಂಪೂರ್ಣ ಗಮನವನ್ನು ಕರ್ನಾಟಕದತ್ತ ಹರಿಸಿದೆ. ದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಸಂಸದರೆಲ್ಲ ಸೇರಿ ‘ಜೀತ್‌ ಹಮಾರಿ ಜಾರಿ ಹೈ, ಅಬ್‌ ಕರ್ನಾಟಕ ಕಿ ಬಾರಿ ಹೈ’ (ನಮ್ಮ ಗೆಲುವಿನ ಓಟ ಜಾರಿಯಲ್ಲಿದೆ, ಮುಂದಿನ ಸರದಿಯಲ್ಲಿ ಕರ್ನಾಟಕ ಇದೆ) ಎಂಬ ಘೋಷಣೆ ಮೊಳಗಿಸಿದ್ದಾರೆ.

ನವದೆಹಲಿ : ತ್ರಿಪುರದಲ್ಲಿ ಎಡರಂಗದ 25 ವರ್ಷಗಳ ಆಡಳಿತವನ್ನು ಕೊನೆಗಾಣಿಸಿ ಕೇಸರಿ ಧ್ವಜ ನೆಟ್ಟಿರುವ ಬಿಜೆಪಿ ಇದೀಗ ತನ್ನ ಸಂಪೂರ್ಣ ಗಮನವನ್ನು ಕರ್ನಾಟಕದತ್ತ ಹರಿಸಿದೆ. ದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಸಂಸದರೆಲ್ಲ ಸೇರಿ ‘ಜೀತ್‌ ಹಮಾರಿ ಜಾರಿ ಹೈ, ಅಬ್‌ ಕರ್ನಾಟಕ ಕಿ ಬಾರಿ ಹೈ’ (ನಮ್ಮ ಗೆಲುವಿನ ಓಟ ಜಾರಿಯಲ್ಲಿದೆ, ಮುಂದಿನ ಸರದಿಯಲ್ಲಿ ಕರ್ನಾಟಕ ಇದೆ) ಎಂಬ ಘೋಷಣೆ ಮೊಳಗಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಎದ್ದು ನಿಲ್ಲುತ್ತಿದ್ದಂತೆ ಸಂಸದರು ಅವರನ್ನು ಈ ಘೋಷಣೆಯ ಮೂಲಕ ಅಭಿನಂದಿಸಿದರು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ.

‘ಪಕ್ಷದ ಗೆಲುವಿನ ಓಟವನ್ನು ಹೀಗೇ ಮುಂದುವರೆಸಲು ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ದೇಶದ ಜನರಿಗೆ ನಮ್ಮ ಬಗ್ಗೆ ಬಹಳ ನಿರೀಕ್ಷೆಯಿದೆ’ ಎಂದು ಪರೋಕ್ಷವಾಗಿ ಅವರು ಕರ್ನಾಟಕದ ಚುನಾವಣೆಯ ಪ್ರಸ್ತಾಪ ಮಾಡಿದರು ಎಂದು ಹೇಳಿದ್ದಾರೆ.

loader