ಯುಪಿಎ ಅವಧಿಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಪ್ರಮಾಣ ಕಡಿಮೆ | ಟ್ರೋಲ್ ಆಯ್ತು ಬಿಜೆಪಿ ಟ್ವೀಟ್ | ಯುಪಿಎ ಅವಧಿಯಲ್ಲಿ 71 ರು. ಇದ್ದ ದರ ಈಗ 80 ರು. ಆಗಿದೆ ಎಂದೂ ತೋರಿಸಲಾಗಿದ್ದು, ಟೀಕೆಗೀಡಾಗಿದೆ.

ಮುಂಬೈ (ಸೆ. 11): ಯುಪಿಎ ಅವಧಿಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಪ್ರಮಾಣ ಕಮ್ಮಿ ಇದೆ ಎಂದು ತೋರಿಸಲು ಟ್ವೀಟರ್‌ನಲ್ಲಿ ಬಿಜೆಪಿ ಹರಿಬಿಟ್ಟ ಗ್ರಾಫ್‌ಗೆ ಭಾರಿ ಗೇಲಿ (ಟ್ರೋಲ್)
ವ್ಯಕ್ತವಾಗಿದೆ.

2009 ರಿಂದ 2014 ರವರೆಗೆ ಯುಪಿಎ ಅವಧಿಯಲ್ಲಿ ಶೇ.75 ರಷ್ಟು ದರ ಏರಿತು. ಬಿಜೆಪಿ ಅವಧಿಯಲ್ಲಿ (2014-2018) ಕೇವಲ ಶೇ.13 ರಷ್ಟು ಏರಿತು ಎಂದು ಗ್ರಾಫಿಕ್ಸ್‌ನಲ್ಲಿ ತೋರಿಸಲಾಗಿದೆ. ಆದರೆ ಯುಪಿಎ ಅವಧಿಯಲ್ಲಿ 71 ರು. ಇದ್ದ ದರ ಈಗ 80 ರು. ಆಗಿದೆ ಎಂದೂ ತೋರಿಸಲಾಗಿದ್ದು, ಟೀಕೆಗೀಡಾಗಿದೆ.

Scroll to load tweet…
Scroll to load tweet…