ಪೈಲೆಟ್ ಎದುರು ಸೋಲುಂಡ ಬಿಜೆಪಿ ಏಕೈಕ ಮುಸ್ಲಿಂ ಅಭ್ಯರ್ಥಿ!
ಪಂಚ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ| ರಾಜಸ್ಥಾನದಲ್ಲಿ ಧೂಳೆಬ್ಬಿಸಿದ ಕಾಂಗ್ರೆಸ್ ಪಕ್ಷ| ಸಚಿನ್ ಪೈಲೆಟ್ ಎದುರು ಸೋಲುಂಡ ಬಿಜೆಪಿ ಏಕೈಕ ಮುಸ್ಲಿಂ ಅಭ್ಯರ್ಥಿ| ಟಾಂಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಸ್ಲಿಂ ಅಭ್ಯರ್ಥಿ ಯೂನುಸ್ ಖಾನ್ ಸೋಲು
ಜೈಪುರ್(ಡಿ.11): ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿನ ಏಕೈಕ ಬಿಜೆಪಿ ಮುಸ್ಲಿಂ ಅಭ್ಯರ್ಥಿ ಯೂನುಸ್ ಖಾನ್ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲೆಟ್ ಎದುರು ಸೋಲುಂಡಿದ್ದಾರೆ.
ಹೌದು, ತೀವ್ರ ಕುತೂಹಲ ಕೆರಳಿಸಿದ್ದ ರಾಜಸ್ಥಾನದ ಟಾಂಕ್ ವಿಧಾನಸಭೆ ಕ್ಷೇತ್ರದಲ್ಲಿ ಕೊನೆಗೂ ಸಚಿನ್ ಪೈಲೆಟ್ ಗೆಲುವಿನ ನಗೆ ಬೀರಿದ್ದಾರೆ. ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿ ಯೂನುಸ್ ಖಾನ್ ಅವರನ್ನು ಕಣಕ್ಕೀಳಿಸುವ ಮೂಲಕ ಬಿಜೆಪಿ ಸಚಿನ್ ಪೈಲೆಟ್ ಬೆವರುವಂತೆ ಮಾಡಿತ್ತು.
ಆದರೆ ಇಂದು ನಡೆದ ಮತ ಎಣಿಕೆಯಲ್ಲಿ ಸಚಿನ್ ಪೈಲೆಟ್ ಅವರು ಯೂನುಸ್ ಖಾನ್ ಅವರನ್ನು ಬರೋಬ್ಬರಿ ೫೪,೧೭೯ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇನ್ನೂ ಅಚ್ಚರಿಯ ವಿಷಯವೆಂದರೆ ಯೂನುಸ್ ಖಾನ್ ವಸುಂಧರಾ ರಾಜೇ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು.