ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯನ್ನು ಸೇರಿದ ಪತಿದಾರ್ ಸಮುದಾಯದ ಮುಖಂಡ ನರೇಂದ್ರ ಪಟೇಲ್ ಬಿಜೆಪಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯನ್ನು ಸೇರಿದ ಕೆಲವೇ ಗಂಟೆಗಳಲ್ಲಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯನ್ನು ಸೇರಲು ನನಗೆ 1 ಕೋಟಿ ರೂ ಆಫರ್ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಗುಜರಾತ್ (ಅ.23): ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯನ್ನು ಸೇರಿದ ಪತಿದಾರ್ ಸಮುದಾಯದ ಮುಖಂಡ ನರೇಂದ್ರ ಪಟೇಲ್ ಬಿಜೆಪಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯನ್ನು ಸೇರಿದ ಕೆಲವೇ ಗಂಟೆಗಳಲ್ಲಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯನ್ನು ಸೇರಲು ನನಗೆ 1 ಕೋಟಿ ರೂ ಆಫರ್ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಟಿಯನ್ನು ನಡೆಸಿದ ನರೇಂದ್ರ ಪಟೇಲ್, 10 ಲಕ್ಷ ರೂ ಮೌಲ್ಯದ 500 ರ ನೋಟನ್ನು ಮಾಧ್ಯಮ ಮಂದಿಗೆ ತೋರಿಸುತ್ತಾ, ಬಿಜೆಪಿ ನನಗೆ ನೀಡಿದ ಅಡ್ವಾನ್ಸ್ ಹಣ ಎಂದಿದ್ದಾರೆ. ಇತ್ತೀಚಿಗೆ ಬಿಜೆಪಿ ಸೇರಿದ ವರುಣ್ ಪಟೇಲ್, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜೀತೂಬಾಯ್ ವಾಘಾನಿಯವರನ್ನು ಭೇಟಿ ಮಾಡಲು ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ನನಗೆ ಹಣದ ಆಫರ್ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

ವರುಣ್ ಪಟೇಲ್, ನನ್ನನ್ನು ಜಿತೂಬಾಯಿ ವಾಘಾನಿಯನ್ನು ಭೇಟಿ ಮಾಡಲು ಕರೆದುಕೊಂಡು ಹೋಗಿದ್ದರು. ಆಗ ಅವರು ನನ್ನನ್ನು ಒಂದು ರೂಮಿಗೆ ಕರೆದುಕೊಂಡು ಹೋಗಿ 10 ಲಕ್ಷ ರೂ ಕ್ಯಾಶ್ ನೀಡಲು ಮುಂದಾದರು. ನಾಳೆ 90 ಲಕ್ಷ ರೂ ಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ನನಗೆ ಈ ಹಣದ ಅಗತ್ಯವಿಲ್ಲ. ಪತೇದಾರ್ ಸಮುದಾಯದ ಅಭಿವೃದ್ಧಿಗಾಗಿ ನಾನು ಪಕ್ಷವನ್ನು ಸೇರಿದ್ದೇನೆ. ಹಣ ಮಾಡುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿಲ್ಲ. ಇದು ಕಷ್ಟಪಟ್ಟು ದುಡಿದ ಹಣವಲ್ಲ. ಭ್ರಷ್ಟಾಚಾರದ ಹಣ ಎಂದು ನರೇಂದ್ರ ಪಟೇಲ್ ಆರೋಪಿಸಿದ್ದಾರೆ.