ಗುಜರಾತ್'​ನ ವಲ್ಸದ್'​​ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದ ಕೆ ಸಿ ಪಟೇಲ್ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ.

ಗುಜರಾತ್(ಮೇ.1): ಗುಜರಾತ್'​ನ ವಲ್ಸದ್'​​ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದ ಕೆ ಸಿ ಪಟೇಲ್ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ.

ಗಾಜಿಯಾಬಾದ್​​ನ ಪರಿಚಿತ ಮಹಿಳೆಯೊಬ್ಬರು ಮನೆಗೆ ಕರೆಯಿಸಿಕೊಂಡು ಚೆನ್ನಾಗಿ ಕುಡಿಸಿ ತಾನು ಅಶ್ಲೀಲ ಭಂಗಿಯಲ್ಲಿರುವುದನ್ನು ವಿಡಿಯೋ ಮಾಡಿದ್ದಾಳೆ. ಆ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. 5 ಕೋಟಿ ರೂ ಕೇಳುತ್ತಿದ್ದಾಳೆ ಎಂದು ಬಿಜೆಪಿ ಸಂಸದ ಕೆ.ಸಿ.ಪಟೇಲ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆದರಿಕೆ ಒಡ್ಡುತ್ತಿರುವ ಮಹಿಳೆ ಬಹಳಷ್ಟು ಸಂಸದರಿಗೆ ಪರಿಚಿತೆ ಎಂಬ ವಿಚಾರ ತಿಳಿದು ಬಂದಿದೆ. ಸಂಸದರ ನೆರವು ಯಾಚಿಸಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವುದು, ಬಳಿಕ ಅವರನ್ನು ಮನೆಗೆ ಕರೆದೊಯ್ದು ಮತ್ತಿನಲ್ಲಿ ತೇಲಿ ಅವರ ಅಶ್ಲೀಲ ಫೋಟೋ ವಿಡಿಯೋ ತೆಗೆಯುವುದು, ಬ್ಲ್ಯಾಕ್‌ ಮೇಲ್ ಮಾಡಿ ಹಣ ಸುಲಿಗೆ ಮಾಡುವುದು ಆಕೆಯ ವೃತ್ತಿಯಂತೆ.

ಹಣ ಕೊಡದವರಿಗೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ ಪ್ರಕರಣಗಳೂ ಈಕೆಯ ವಿರುದ್ಧ ದಾಖಲಾಗಿವೆಯಂತೆ. ಐಪಿಸಿ 384 ಪ್ರಕರಣ ದಾಖಲಿಸಿರುವ ಪೊಲೀಸರು ಆ ಮಹಿಳೆ ಮತ್ತವರ ಗ್ಯಾಂಗ್‌'ಗಾಗಿ ಜಾಲ ಬೀಸಿದ್ದಾರೆ.