ನವದೆಹಲಿ(ಜು.23): ಭಾರತದ ಬಹುತೇಕ ರಾಜಕೀಯ ನಾಯಕರಿಗೂ , ಪಾಕ್’ನ ಉಗ್ರ ಮಸೂದ್ ಅಜರ್’ಗೂ ಅದೇನೊ ಸುಮಧುರ ಸಂಬಂಧವಿದ್ದಂತಿದೆ.

ಮಸೂದ್ ಅಜರ್’ನ ಪ್ರಸ್ತಾಪ ಬಂದಾಗಲೆಲ್ಲಾ ಆತನಿಗೆ ಭರಪೂರ ಮರ್ಯಾದೆ ಕೊಡುವ ನಾಯಕರಿಗೇನು ಕಮ್ಮಿಯಿಲ್ಲ. 

ಈ ಹಿಂದೆ ಮಸೂದ್’ನನ್ನು ಮಸೂದ್ ಅಜರ್ ಜೀ ಎಂದು ಸಂಭೋಧಿಸಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಟ್ರೋಲ್’ಗೊಳಗಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೀಗ ಬಿಜೆಪಿ ಸಂಸದರೊಬ್ಬರು ಪಾಕ್ ಉಗ್ರನನ್ನು ಮಸೂದ್ ಅಜರ್ ಜೀ ಎಂದು ಕರೆದು ಪೇಚಿಗೆ ಸಿಲುಕಿದ್ದಾರೆ. ವಿಷ್ಣು ದಯಾಳ್ ರಾಮ್ ಅವರೇ ಮಸೂದ್’ನನ್ನು ಜೀ ಎಂದು ಕರೆದ ಬಿಜೆಪಿ ಸಂಸದ.

  ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ)ದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ, ವಿಷ್ಣು ದಯಾಳ್ ಭಯೋತ್ಪಾದಕರ ಪಟ್ಟಿಯನ್ನು ಹೇಳುವಾಗ ಬಾಯ್ತಪ್ಪಿನಿಂದ ಮಸೂದ್’ನನ್ನು ಮಸೂದ್ ಅಜರ್ ಜೀ ಎಂದು ಹೇಳಿದರು.

ತಕ್ಷಣವೇ ಎಚ್ಚೆತ್ತುಕೊಂಡ ವಿಷ್ಣು ದಯಾಳ್, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಸೂದ್ ಅಜರ್ ಎಂದು ಮತ್ತೆ ಹೇಳಿದರು.