ತುಮಕೂರು : ಲೋಕಸಭಾ ಚುನಾವಣೆ ಮುಕ್ತಾಯವಾಗಿ ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಇದೇ ವೇಳೆ ಬಿಜೆಪಿಯಿಂದ ಆಯ್ಕೆಯಾದ ಸಂಸದರೋರ್ವರು ಬಿಜೆಪಿ ಸೇರಲಿದ್ದಾರೆ ಎಂದು ಕೈ ಮುಖಂಡ ಹೇಳಿದ್ದಾರೆ. 

ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಪರ್ಧಿಸಿದ್ದ ಎಚ್.ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ ಬಿಜೆಪಿ ನಾಯಕ ಜಿ.ಎಸ್.ಬಸವರಾಜು  ಕಾಂಗ್ರೆಸ್ ಸೇರಲಿದ್ದಾರೆ ಎಂದು ತುಮಕೂರು ಕೈ ನಾಯಕ ಕೆ.ಎನ್ ರಾಜಣ್ಣ ಹೇಳಿದ್ದಾರೆ. 

ಕಾಂಗ್ರೆಸ್ ನಾಯಕ ಮುದ್ದಹನುಮೇಗೌಡ ವಿಧಾನಸಭೆಗೆ ಸ್ಪರ್ಧೇ ಮಾಡುತ್ತಾರೆ. ಕುಣಿಗಲ್ ಕ್ಷೇತ್ರದಿಂದ ಅವರು ಅಭ್ಯರ್ಥಿಯಾಗಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್ ಬಸವರಾಜು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ರಾಜಣ್ಣ ಹೇಳಿದರು. 

ದೇವೇಗೌಡರಿಂದ ನಾನು ತುಮಕೂರಿನಲ್ಲಿ ಗೆದ್ದಿದ್ದೇನೆ : ಬಿಜೆಪಿ ಸಂಸದ

ತುಮಕೂರು ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತ. ಆದರೂ ಬಸವರಾಜುಗೆ ಅಭಿನಂದನೆ ಹೇಳುತ್ತೆನೆ. ಬಸವರಾಜು  20 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ
ಕಾಂಗ್ರೆಸ್ ನಾಯಕರ ಸಂಪರ್ಕ ಹೆಚ್ಚು ಇದೆ ಎಂದರು. 

ಇದೇ ರೀತಿಯಾದ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದು, ಕರ್ನಾಟಕ ಸರ್ಕಾರವು ಶೀಘ್ರ ಪತನವಾಗಲಿದೆ ಎಂದೂ ಹೇಳುತ್ತಿದ್ದಾರೆ.