ಬಿಜೆಪಿ ಸಂಸದರೊಬ್ಬರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಿಢೀರ್ ಗಿರ ಗಿರನೇ ಗಿರಕಿ ಹೊಡೆದು ಸೇಫ್ ಆಗಿ ಲ್ಯಾಂಡಿಂಗ್ ಆಗಿದ್ದು, ಕಾಪ್ಟರ್ ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೈಪುರ್, [ಜೂ.30]: ರಾಜಸ್ಥಾನದ ಅಳ್ವಾರ್ ಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪೈಲಟ್ ನಿಯಂತ್ರಣ ತಪ್ಪಿ ಗಾಳಿಯಲ್ಲಿ ಗಿರಕಿ ಹೊಡೆದಿದೆ.
ಅಳ್ವಾರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಾಲಕನಾಥ್ ಪ್ರಯಾಣಿಸುತ್ತಿದ್ದ ಚಾಪರ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಗಿರಕಿ ಹೊಡೆದಿದೆ. ಲ್ಯಾಂಡ್ ಮಾಡುವಾಗ ಜೋರಾಗಿ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಸಂಸದರ ಸ್ವಾಗತಕ್ಕೆ ನೆರೆದಿದ್ದ ಕಾರ್ಯಕರ್ತರು ಹಾಗೂ ಚಾಪರ್ ಒಳಗಿದ್ದ ಎಂಪಿ ಬಾಲಕನಾಥ್ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಆದ್ರೆ ಸಮಯ ಪ್ರಜ್ಞೆ ಮೆರೆದ ಪೈಲಟ್, ಆ ಪ್ರದೇಶದಿಂದ ಚಾಪರ್ ಅನ್ನ ನಿಧಾನವಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಮೇಲೆ ತೆಗೆದುಕೊಂಡು ಹೋಗಿದ್ದಾನೆ.
ಬಳಿಕ ಮತ್ತೆ ನಿಧಾನವಾಗಿ ಅದೇ ಪ್ರದೇಶಕ್ಕೆ ತಂದು ಲ್ಯಾಂಡ್ ಮಾಡಿದ್ದು, ಸಂಭವಿಸಬೇಕಿದ್ದ ಬಾರೀ ಅನಾಹುತವನ್ನು ತಪ್ಪಿಸಿದ್ದಾರೆ.
