ಕಾಲೇಜು ವಿದ್ಯಾರ್ಥಿನಿಯೊಂದಿಗೆ ಬಿಜೆಪಿ ಶಾಸಕರ ಅಕ್ರಮ ಸಂಬಂಧ

First Published 14, Jul 2018, 3:19 PM IST
BJP MLAs Wife Accuses Her Husband Having ExtraMarital Affair
Highlights

ತಮ್ಮ ಪತಿಗೆ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಇರುವುದಾಗಿ ಬಿಜೆಪಿ ಶಾಸಕರು ಪತ್ನಿಯೋರ್ವರು ಆರೋಪ ಮಾಡಿದ್ದಾರೆ. 

ಶ್ರೀನಗರ :  ಬಿಜೆಪಿ ಶಾಸಕರೋರ್ವರ ಪತ್ನಿ ಇದೀಗ ಸಾರ್ವಜನಿಕವಾಗಿಯೇ ತಮ್ಮ ಪತಿಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವುದಾಗಿ ಆರೋಪ ಮಾಡಿದ್ದಾರೆ. 

ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಇದ್ದು, ಆಕೆಯೊಂದಿಗೆ ವಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರ್ ಎಸ್ ಪುರ ಕ್ಷೇತ್ರದ ಶಾಸಕ ಗಗನ್ ಭಗತ್ ಅವರ ವಿರುದ್ಧ ಅವರ ಪತ್ನಿ ಮೋನಿಕಾ ಶರ್ಮಾ ಆರೋಪ ಮಾಡಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿನಿಯ ತಂದೆಯೂ ಕೂಡ ಧ್ವನಿಗೂಡಿಸಿದ್ದು, ತಮ್ಮ ಮಗಳನ್ನುಅಪಹರಿಸಲು ಯತ್ನಿಸಿದ್ದರು ಎಂದೂ ಕೂಡ ಹೇಳಿದ್ದಾರೆ. ಆದರೆ ಈ ಬಗ್ಗೆ ಕಾಲೇಜು ವಿದ್ಯಾರ್ಥಿನಿ ಹಾಗೂ ಶಾಸಕರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಇನ್ನು ತಮ್ಮ ಪತಿ ತಮ್ಮ ಕುಟುಂಬ ನಿರ್ವಹಣೆಗೆ ಬಿಡಿಗಾಸನ್ನೂ ಕೂಡ ಕೊಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಆಕೆ ಬಿಜೆಪಿ ಹಿರಿಯ ಮುಖಂಡರನ್ನೂ ಕೂಡ ಭೇಟಿ ಮಾಡಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದಾರೆ.

loader