ಶಾಸಕಿ ಸಂಗೀತ ಛಾರಲ್ ಅವರ ಪತಿ ವಿಜಯ್ ಛಾರಲ್ ಏಕಾಏಕಿ ಟೋಲ್ ಸಂಗ್ರಹ ಘಟಕದ ಒಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.

ಮಧ್ಯಪ್ರದೇಶ(ಅ.28):ಸಯ್ಲಾನಾ ಕ್ಷೇತ್ರದ ಬಿಜೆಪಿ ಶಾಸಕಿಯ ಪತಿ ಹಾಗೂ ಅವರ ಗುಂಪು ಟೋಲ್ ಸಿಬ್ಬಂದಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕಿ ಸಂಗೀತ ಛಾರಲ್ ಅವರ ಪತಿ ವಿಜಯ್ ಛಾರಲ್ ಏಕಾಏಕಿ ಟೋಲ್ ಸಂಗ್ರಹ ಘಟಕದ ಒಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಆದರೆ ಈ ಹಲ್ಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

Scroll to load tweet…