ಸಂಸ್ಕಾರವಿಲ್ಲದ ಮಕ್ಕಳನ್ನು ಹೆರುವ ಬದಲು ಬಂಜೆಯಾಗಿಯೇ ಇದ್ದು ಬಿಡಿ; ಬಿಜೆಪಿ ಶಾಸಕ

BJP MLA’s advice to women: Produce sanskari kids or remain infertile
Highlights

ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಗರ್ಭಿಣಿಯಾಗದೇ ಉಳಿದು ಬಿಡಿ ಎಂದು ಬಿಜೆಪಿ ಶಾಸಕ ಪನ್ನಲಾಲ್ ಶಕ್ಯ ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಕೆಲವು ಮಹಿಳೆಯರು ಉಪಯೋಗಕ್ಕೆ ಬಾರದ ನಾಯಕರಿಗೆ ಜನ್ಮ  ನೀಡಿದ್ದಾರೆ. ಅಂತಹ ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಮಹಿಳೆಯರು ಹಾಗೆಯೇ ಉಳಿದು ಬಿಡಬೇಕು ಎಂದು ಬಿಜೆಪಿ ಶಾಸಕ ಶಕ್ಯ ಹೇಳಿಕೆ ನೀಡಿದ್ದಾರೆ. 

ನವದೆಹಲಿ (ಜೂ. 14): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿ ಎಂಎಲ್ ಎ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಗರ್ಭಿಣಿಯಾಗದೇ ಉಳಿದು ಬಿಡಿ ಎಂದು ಬಿಜೆಪಿ ಶಾಸಕ ಪನ್ನಲಾಲ್ ಶಕ್ಯ ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಕಾಂಗ್ರೆಸ್ ಗರೀಬಿ ಹಟಾವೋ ಎಂಬ ಘೋಷವಾಕ್ಯ ಮೂಲಕ ಹುಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ನಾಯಕರು ಬಡತನವನ್ನು ಮಾತ್ರ ಇದುವರೆಗೆ ನಿರ್ಮೂಲನೆ ಮಾಡಿಲ್ಲ. ಕೆಲವು ಮಹಿಳೆಯರು ಉಪಯೋಗಕ್ಕೆ ಬಾರದ ನಾಯಕರಿಗೆ ಜನ್ಮ  ನೀಡಿದ್ದಾರೆ. ಅಂತಹ ಸಂಸ್ಕಾರವಿಲ್ಲದ ಮಕ್ಕಳಿಗೆ ಜನ್ಮ ನೀಡುವ ಬದಲು ಮಹಿಳೆಯರು ಹಾಗೆಯೇ ಉಳಿದು ಬಿಡಬೇಕು ಎಂದು ಬಿಜೆಪಿ ಶಾಸಕ ಶಕ್ಯ ಹೇಳಿಕೆ ನೀಡಿದ್ದಾರೆ. 

ಶಕ್ಯರವರು ಈ ರೀತಿ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಹೊರ ದೇಶದಲ್ಲಿ ಮದುವೆಯಾಗಿರುವುದನ್ನು ಇವರು ಪ್ರಶ್ನಿಸಿದ್ದರು. ವಿರಾಟ್ ಕೊಹ್ಲಿ ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಹಣ, ಖ್ಯಾತಿ ಗಳಿಸಿ ಹೊರ ದೇಶದಲ್ಲಿ ಮದುವೆ ಆಗಿರುವುದು ದೇಶಭಕ್ತಿಯಲ್ಲ ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.     

loader