ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಗಾಯಕ ಅಭಿಜಿತ್‌ ಸಾವಂತ ಗಾಯನಕ್ಕೆ ಶಾಸಕಿ ರೂಪಾಲಿ ನಾಯ್ಕ ಹೆಜ್ಜೆಹಾಕಿದ್ದಾರೆ.

ಉತ್ಸವದ ಅಂಗವಾಗಿ ಶನಿವಾರ ರಾತ್ರಿ ಅಭಿಜಿತ್‌ ಸಾವಂತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ರೂಪಾಲಿ ನಾಯ್ಕ ಎದ್ದು ನಿಂತುಕೊಂಡು ಚಪ್ಪಾಳೆ ಹೊಡೆಯುತ್ತಾ ಹೆಜ್ಜೆ ಹಾಕಿದರು.

 ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ವಿವಿಧ ಚಲನಚಿತ್ರ ಗೀತೆಗಳನ್ನು ಅಭಿಜಿತ್‌ ಪ್ರಸ್ತುತ ಪಡಿಸಿದರು. 30,000ಕ್ಕೂ ಅಧಿಕ ಜನರು ಮೊದಲ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.